ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ!

ಬುಧವಾರ, 11 ಜನವರಿ 2023 (10:37 IST)
ಬೆಂಗಳೂರು : ಇಷ್ಟು ದಿನ ಬೆಂಗಳೂರಿನ ಏರಿಯಾಗಳಲ್ಲಿ ಬೀದಿ ನಾಯಿ ಕಾಟದ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈ ಬಾರಿ ಬೆಕ್ಕುಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದು, ಬೆಕ್ಕಿನ ಕಾಟಕ್ಕೆ ಬೇಸತ್ತಿರೋ ಸ್ಥಳೀಯರು ದಯಾಮಾಡಿ ಬೆಕ್ಕುಗಳಿಗೂ ನಾಯಿಗಳಂತೆ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ.

ಹೌದು. ಬೆಂಗಳೂರಿನ ವಾರ್ಡ್ ನಂಬರ್ 5 ನ್ಯಾಯಾಂಗ ಬಡಾವಣೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಬೆಕ್ಕುಗಳ ಹಾವಳಿ ಜಾಸ್ತಿಯಾಗಿದಯಂತೆ. ಬೆಕ್ಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಮರಿಗಳನ್ನು ಹಾಕಲಿದ್ದು, ಚಿಕ್ಕ ಮರಿಗಳಿಂದ ದೊಡ್ಡ ದೊಡ್ಡ ಬೆಕ್ಕುಗಳವರೆಗೂ ಪ್ರತಿನಿತ್ಯ ಇಲ್ಲಿನ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಅಂತಾ ಪಾಲಿಕೆಗೆ ದೂರು ನೀಡಿದ್ದಾರೆ.

ಇಲ್ಲಿನ ಮನೆಗಳಲ್ಲಿ ಯಾರೋ ಸಾಕಿ ಬಿಟ್ಟ ಬೆಕ್ಕುಗಳು ಬಂದು ಸೇರಿಕೊಳ್ಳುತ್ತಿದ್ದು, ಎಲ್ಲೆಂದರಲ್ಲಿ 6 ತಿಂಗಳಿಗೊಮ್ಮೆ ಮರಿಗಳನ್ನ ಹಾಕುತ್ತೀವೆ ಅನ್ನೋದೆ ಈ ಭಾಗದ ಜನರಿಗೆ ದೊಡ್ಡ ತಲೆನೋವಾಗಿದೆ.

ಕೆಲವೊಮ್ಮೆ ಕಿಟಕಿ ಒಳಗಡೆಯಿಂದ ನುಗ್ಗುವ ಬೆಕ್ಕುಗಳು ಮಂಚದ ಕೆಳಗೆ ಮರಿ ಹಾಕಿವೆ. ಕೆಲವು ಬೆಕ್ಕುಗಳಂತೂ ರೌಡಿಸಂ ಕೂಡ ತೋರಿಸುತ್ತ ಅಂತೆ. ಈಗೆಲ್ಲ ಸಾಲು ಸಾಲು ದೂರಗಳನ್ನ ಪಾಲಿಕೆಗೆ ಈ ಭಾಗದ ಜನ ಸಲ್ಲಿಸಿದ್ದು, ದಯಾಮಾಡಿ ಈ ಭಾಗದಲ್ಲಿರುವ ಬೆಕ್ಕುಗಳಿಗೆ ವಯಸ್ಸಿನ ಆಧಾರದ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿ ಅಂತಾ ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ