‘ತಾಕತ್ತಿದ್ರೆ ಬಿಜೆಪಿ ಶಾಸಕರನ್ನ ಆಪರೇಷನ್ ಮಾಡಲಿ ನೋಡೋಣ’

ಮಂಗಳವಾರ, 2 ಜುಲೈ 2019 (18:42 IST)
ವಿಧಾನ ಮಂಡಲ ಅಧಿವೇಶನದೊಳಗೆ ಸಮ್ಮಿಶ್ರ ಸರಕಾರ ಪತವಾಗಲಿದೆ. ಹೀಗಂತ ಬಿಜೆಪಿ ಶಾಸಕ ಭವಿಷ್ಯ ನುಡಿದಿದ್ದು, ತಾಕತ್ ಇದ್ದರೆ ಒಬ್ಬ ಬಿಜೆಪಿ ಶಾಸಕನನ್ನು ಆಪರೇಷನ್ ಮಾಡಲಿ ಎಂದು ಕಾಂಗ್ರೆಸ್ ಅಧ್ಯಕ್ಷರಿಗೆ ಸವಾಲು ಹಾಕಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಅಧಿವೇಶನದೊಳಗೆ ಸರ್ಕಾರದ ಪತನ ಆಗೋದು ನಿಶ್ಚಿತ. ಹೀಗಂತ ಜೆಡಿಎಸ್-ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ವೈಫಲ್ಯದ ವಿರುದ್ಧ ಶಾಸಕರು ಭುಗಿಲೆದ್ದಿದ್ದಾರೆ.

ಜಿಂದಾಲ್ ಗೆ ಭೂಮಿ ಹಸ್ತಾಂತರಕ್ಕೆ ಕಾಂಗ್ರೆಸ್ ಶಾಸಕರೇ ವಿರೋಧ ಮಾಡಿದ್ರು. ಒಂದೂವರೆ ಲಕ್ಷಕ್ಕೆ 30*40 ನಿವೇಶನ ಸಿಗೋದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಎಕರೆ ಜಮೀನಿಗೆ ಕೇವಲ 1 ಲಕ್ಷ ರೂಪಾಯಿ ಕೊಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ರಿಯಲ್ ಎಸ್ಟೇಟ್, ಭೂ ಮಾಫಿಯಾ ಮಾಡ್ತಾ ಇದೆ ಎಂದು ದೂರಿದ್ರು.

ಉಮೇಶ್ ಜಾಧವ್, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ.  ಅವರ ನಿರ್ಧಾರ ಅಭಿನಂದನಾರ್ಹ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಮೆದುಳು ಇಲ್ಲ, ರೋಷನ್ ಬೇಗ್ ಹೇಳಿದ್ದಾರೆ. ನೀನೊಬ್ಬ ಬಫೂನ್ ಅಂತ. ದಿನೇಶ್ ಗುಂಡೂರಾವ್ ಹೇಳ್ತಾರೆ ರಿವರ್ಸ್ ಆಪರೇಷನ್ ಮಾಡ್ತಿವಿ ಅಂತ. ತಾಕತ್ ಇದ್ರೆ ಒಬ್ಬ ಬಿಜೆಪಿ ಶಾಸಕರನ್ನ ಆಪರೇಷನ್ ಮಾಡ್ಲಿ ನೋಡೋಣ ಎಂದು ಸವಾಲು ಹಾಕಿದ್ರು. ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಬುದ್ಧಿ ಭ್ರಮಣೆ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಬುದ್ಧಿ ಭ್ರಮಣೆ ಆಗಿದೆ ಎಂದು ವ್ಯಂಗ್ಯವಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ