ಪ್ರಧಾನಿ 4 ರಾಜ್ಯಗಳನ್ನು ಕರೆದು ಸಭೆ ಮಾಡಲಿ-ಡಿಸಿಎಂ ಡಿ.ಕೆ.ಶಿವಕುಮಾರ್

ಗುರುವಾರ, 21 ಸೆಪ್ಟಂಬರ್ 2023 (21:18 IST)
ಕುಡಿಯುವ ನೀರಿಗೆ ಮೊದಲ ಆದ್ಯತೆ.. ನಂತರ ಕೃಷಿಗೆ ಆದ್ಯತೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದೇವೆ.. ನಾಲ್ಕು ರಾಜ್ಯಗಳನ್ನು ಕರೆದು ಸಭೆ ಮಾಡಿದ್ರೆ ಉತ್ತಮ ಎಂದು ತಿಳಿಸಿದ್ರು.. ಸಚಿವರು ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ.. ಸಂಕಷ್ಟ ಸೂತ್ರ ಅಳವಡಿಕೆಗೂ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ. 4,500 ಕ್ಯೂಸೆಕ್ ಹೊರ ಹರಿವು ಇದೆ.. 8 ಸಾವಿರ ಒಳ ಹರಿವು ಇದೆ ಎಂದು ತಿಳಿಸಿದ್ರು.. ಜುಲೈನಲ್ಲಿ ವಾಡಿಕೆ ಮಳೆಯಾಗಿದೆ.. ಆಗಸ್ಟ್ ತಿಂಗಳಲ್ಲಿ ಮಳೆ ಬಂದಿಲ್ಲ.. ರಾಜ್ಯದಲ್ಲಿ ಮಳೆ ಕೊರತೆ ಎದುರಿಸಿದ್ದೇವೆ.. ಈ ಪರಿಸ್ಥಿತಿಯಿಂದ ಒಳ ಹರಿವು ಕಡಿಮೆಯಾಗಿದೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ