ನಾಳೆಯ ಏಕದಿನ ಪಂದ್ಯಕ್ಕೆ ಇಂದು ಸಂಜೆ ಅಭ್ಯಾಸ ಆರಂಭಿಸಲಿರುವ ಕೆಎಲ್ ರಾಹುಲ್ ಪಡೆ

ಗುರುವಾರ, 21 ಸೆಪ್ಟಂಬರ್ 2023 (16:35 IST)
ಮೊಹಾಲಿ: ಏಷ್ಯಾ ಕಪ್ ಕೂಟ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಮೊನ್ನೆಯಷ್ಟೇ ಲಂಕಾದಿಂದ ಬಂದಿಳಿದಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಈಗ ಮೊಹಾಲಿಯಲ್ಲಿ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ. ಕುಟುಂಬದ ಜೊತೆ ಗಣೇಶ ಹಬ್ಬದ ಸಂಭ್ರಮಾಚರಿಸಿದ ಕ್ರಿಕೆಟಿಗರು ಇಂದು ಮತ್ತೆ ಕ್ರಿಕೆಟ್ ಕಣಕ್ಕೆ ಮರಳುತ್ತಿದ್ದಾರೆ.

ಕೆಎಲ್ ರಾಹುಲ್ ನೇತೃತ್ವದಲ್ಲಿ ಮೊದಲ ಎರಡು ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಪಂದ್ಯಕ್ಕಾಗಿ ಇಂದು ಸಂಜೆಯಿಂದ ಮೊಹಾಲಿಯಲ್ಲಿ ಟೀಂ ಇಂಡಿಯಾ ಅಭ್ಯಾಸ ನಡೆಸಲಿದೆ. ನಾಳೆ ಮಧ್ಯಾಹ್ನ ಮೊದಲ ಏಕದಿನ ಪಂದ್ಯ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ