ನಿಮ್ಮ ಅಂಚೆ ಜೀವ ವಿಮೆ ರಿನಿವಲ್ ಗೆ ಅವಕಾಶ
ಲಾಕ್ ಡೌನ್ ಸಮಯದಲ್ಲಿ ಅಂಚೆ ಕಚೇರಿ ಗ್ರಾಹಕರ ಜೀವ ವಿಮೆ ಪುನರುಜ್ಜೀವನಗೊಳಿಸಲು ಅವಕಾಶ ಕಲ್ಪಿಸಿದೆ.
5 ವರ್ಷಕ್ಕಿಂತ ಜಾಸ್ತಿ ಸಮಯ ಕಟ್ಟದೇ ಇರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು , ಮೇ 31 ರ ಒಳಗಾಗಿ ಉತ್ತಮ ಆರೋಗ್ಯದ ಆರೋಗ್ಯ ಪತ್ರವನ್ನು ಹತ್ತಿರದ ಅಂಚೆ ಕಚೇರಿಯಲ್ಲಿ ನೀಡಬೇಕು. ಆ ಮೂಲಕ ಪಾಲಿಸಿಯ ಸೌಲಭ್ಯವನ್ನು ಪಡೆಯಬಹುದು.
ಇಲ್ಲದಿದ್ದಲ್ಲಿ ಮೇ 31 ರ ನಂತರ ಇಂತಹ ಪಾಲಿಸಿಗಳು ರದ್ದುಗೊಳ್ಳುತ್ತವೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ತಿಳಿಸಿದೆ.