ಮೇ 3 ರವರೆಗೂ ಸೀಲ್ ಡೌನ್ ಎಂದ ಸಚಿವ

ಮಂಗಳವಾರ, 28 ಏಪ್ರಿಲ್ 2020 (21:41 IST)
ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಮಹಾಮಾರಿ ಕೋವಿಡ್-19 ಸೋಂಕು ರಾಜ್ಯದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹೇಳಿದ್ದಾರೆ.

ಸಚಿವ ಡಾ.ಕೆ.ಸುಧಾಕರ್ ಮಾತನಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಇದುವರೆಗೂ 520 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 198 ಮಂದಿ ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 20 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 300 ಪ್ರಕರಣಗಳು ಸಕ್ರಿಯ  ಪ್ರಕರಣಗಳು ಇವೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ಸೋಂಕಿತರ ಪೈಕಿ ಇಬ್ಬರು ಮೃತ ಪಟ್ಟಿದ್ದಾರೆ. ಒಟ್ಟು  11 ಮಂದಿ ಗುಣಮುಖರಾಗಿದ್ದಾರೆ.  5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಪ್ರಕರಣಗಳಿಂತಲೂ ಹೆಚ್ಚು ಸೋಂಕಿತರ ಸಂಖ್ಯೆ ಇದ್ದಲ್ಲಿ  ಅಂತಹ ಜಿಲ್ಲೆಗಳನ್ನು ರೆಡ್‌ ಝೋನ್ ವಲಯವಾಗಿ ಗುರುತಿಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಸದ್ಯ 5 ಪ್ರಕರಣಗಳು ಮಾತ್ರ ಇವೆ ಎಂದರು.

ನೆರೆಯ ಆಂಧ್ರಪ್ರದೇಶದ ಹಿಂದೂಪುರ ಸಂಪೂರ್ಣ ರೆಡ್‌ ಝೋನ್ ಆಗಿರುವುದರಿಂದ, ಆಂಧ್ರದ ಗಡಿಯಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆ ಇರುವುದರಿಂದ ಮೇ 3 ರ ವರೆಗೂ ಲಾಕ್‌ಡೌನ್ ಮುಂದುವರೆಸಲಾಗುವುದು. ಅದೇ ರೀತಿ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಗರದಲ್ಲಿ ಜಾರಿಯಲ್ಲಿರುವ ಸೀಲ್‌ ಡೌನ್‌ನ್ನು ಮೇ 3 ರವರೆಗೂ  ಮುಂದುವರೆಸಲಾಗುವುದು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ