ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕರಿಬ್ಬರಿಗೆ ಜೀವಾವಧಿ ಶಿಕ್ಷೆ
ಹದಿನಾರು ವರ್ಷದ ಬಾಲಕನೊಬ್ಬನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಅಪ್ರಾಪ್ತ ಬಾಲಕನೊಬ್ಬನನ್ನು ಪುಸಲಾಯಿಸಿ ಆಗಾಗ್ಗೆ ಆತನ ಮೇಲೆ 36 ವರ್ಷದ ಯೋಗೇಶ ಮಳೇಪ್ಪ ಪತ್ತಾರ ಅನೈಸರ್ಗಿಕವಾಗಿ ಗುದ ಸಂಭೋಗ ಮಾಡುತ್ತಿದ್ದನು. ಇನ್ನೊಬ್ಬ ಆರೋಪಿ 28 ವರ್ಷದ ಸಿದ್ದಯ್ಯ ಹಿರೇಮಠ ಸಹ ಬಾಲಕನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಬಲವಂತದಿಂದ ಸಂಭೋಗ ನಡೆಸಿದ್ದನು.
ಕಲಬುರಗಿಯ ಚಿತ್ತಾಪೂರ ಠಾಣೆಯಲ್ಲಿ ಈ ಕುರಿತು 2016ರಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.