ಬುಲೆಟ್ ಜಿಮ್ ಮಾಲೀಕ ಗೌತಮ್ ಬಂಧಿತ ಆರೋಪಿಯಾಗಿದ್ದು, ಈತ ದೈಹಿಕ ಫಿಟ್‍ನೆಸ್ ಗಾಗಿ ಜಿಮ್ ಗೆ ಬರುತ್ತಿದ್ದ ಶ್ರೀಮಂತ ಮನೆತನದ ಯುವತಿಯರನ್ನು ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮ ಅಂತ ಅವರನ್ನು ನಂಬಿಸಿ ಅವರ ಜೊತೆಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದ.
ಈತನ ಈ ನೀಚ ಕೃತ್ಯಕ್ಕೆ ಮೂವರು ಯುವತಿಯರ ಜೀವನ ಹಾಳಾಗಿದೆ. ಇವರಲ್ಲಿ ಒಬ್ಬ ಯುವತಿ ಗರ್ಭಿಣಿಯಾದ ಕಾರಣ ಗೌತಮ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ದೂರಿನ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಯುವತಿಯನ್ನು ಈತ ಮದುವೆಯಾಗಿರುವುದಾಗಿ ತಿಳಿದುಬಂದಿದೆ, ಮೂರನೇಯವಳು ಈತನ ಮೋಸದಾಟ ಬಯಲಾಗಿ ಜೈಲು ಸೇರಿರುವುದನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.