ಲಿಂಗಾಯುತ ಸ್ವತಂತ್ರ ಧರ್ಮ ಅನ್ನೋದು ಸರಿ: ಸಿಎಂ

ಗುರುವಾರ, 20 ಜುಲೈ 2017 (19:45 IST)
ಲಿಂಗಾಯುತ ಧರ್ಮ ಸ್ವತಂತ್ರ ಧರ್ಮ ಅನ್ನೋದು ಸರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಲಿಂಗಾಯುತ ಧರ್ಮ ಸ್ವತಂತ್ರ ಧರ್ಮ ಎನ್ನುವುದು ವೈಯಕ್ತಿಕವಾಗಿ ನನಗೂ ಸರಿ ಅನ್ನಿಸಿದೆ. ಲಿಂಗಾಯುತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿದ್ದ ಎಂದು ಘೋಷಿಸಿದ್ದಾರೆ.
 
ನಗರದ ಮುರುಘಾಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯುತ ಧರ್ಮ ಸ್ವತಂತ್ರವಾಗಿದೆ ಎಂದು ಅಭಿಪ್ರಾಯಪಟ್ಟರು. 
 
ನಿಜಗುಣಾನಂದ ಸ್ವಾಮಿಜಿಗಳು ಮಾತನಾಡಿ, ವಿಶ್ವದಲ್ಲಿ ಹಿಂದೂ ಧರ್ಮ ಎನ್ನುವುದು ಇಲ್ಲವೇ ಇಲ್ಲ. ಆದ್ದರಿಂದ ಲಿಂಗಾಯುತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಬೇಕಾಗಿ ಕೋರಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ