ರಾಜ್ಯಕ್ಕೆ ಕತ್ತಲೆ ಭಾಗ್ಯ: ಮಳೆಗಾಲ ಮುಗಿಯುವ ಮುನ್ನವೇ ವಿದ್ಯುತ್ ಬರ
ಬೆಂಗಳೂರು: ಅನಿಯಮಿತ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಪತ್ರದಲ್ಲಿ ತಿಳಿಸಿದ್ದು, ಮಳೆಗಾಲ ಮುಗಿಯುವ ಮುನ್ನವೇ ರಾಜಕ್ಕೆ ವಿದ್ಯುತ್ ಬರ ಆವರಿಸಿದೆ.
ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಬೆಸ್ಕಾಂ ಐಇಎಕ್ಸ್ ನಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಈಗಾಗಲೇ ಶುರುವಾಗಿದ್ದು ದಿನಕ್ಕೆ ಹತ್ತು ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಆದರೆ ಈ ವಿದ್ಯುತ್ ಸಮಸ್ಯೆ ಎಂದು ಬಗೆಹರಿಯಲಿದೆ ಎನ್ನುವುದರ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿಲ್ಲ.