"ಬರ" ದಲ್ಲೂ ಭಿನ್ನಮತ: ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ರಾಜ್ಯ ಪ್ರವಾಸ

ಶನಿವಾರ, 13 ಮೇ 2017 (19:23 IST)
ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ "ಬರ" ದಲ್ಲೂ ಭಿನ್ನಮತ ಉಲ್ಬಣಿಸಿದೆ. ಇದೀಗ ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಮೇ 10 ರವರೆಗೆ ಪದಾಧಿಕಾರಿಗಳ ಬಿಕ್ಕಟ್ಟು ಪರಿಹರಿಸುವಂತೆ ಈಶ್ವರಪ್ಪ, ಯಡಿಯೂರಪ್ಪಗೆ ಮನವಿ ಮಾಡಿದ್ದರು. ಆದರೆ. ಬಿಕ್ಕಟ್ಟು ಪರಿಹರಿಸದಿರುವುದರಿಂದ ಮತ್ತೆ ಮುನಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೇ 18 ರಿಂದ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಪ್ರವಾಸದಲ್ಲಿ ಈಶ್ವರಪ್ಪ ಜೊತೆಯಾಗುವುದು ಅನುಮಾನವಾಗಿದೆ ಎನ್ನಲಾಗುತ್ತಿದೆ. 
 
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮೇ 15 ರಿಂದ ಮೇ 17 ರವರೆಗೆ ಉತ್ತರ ಕರ್ನಾಟಕದಲ್ಲಿ ಬರ ಅಧ್ಯಯನ ನಡೆಸಲಿದ್ದು, ವಿಜಯಪುರ, ರಾಯಚೂರು, ಕೊಪ್ಪಳ, ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. 
 
ಮೇ 18 ರಂದು ಆರಂಭವಾಗಲಿರುವ ಬಿಎಸ್‌ವೈ ನೇತೃತ್ವದ ರಾಜ್ಯ ಪ್ರವಾಸಕ್ಕೆ ತೆರಳಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ