Lok Sabha Election 2024: ಮತದಾನ ಮಾಡಲು ಸ್ಟೈಲಾಗಿ ಬಂದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಮತಗಟ್ಟೆಗೆ ಬಂದಿದ್ದ ಖದರೇ ಬೇರೆಯಾಗಿತ್ತು. ಕಾರಿನ ಡೋರ್ ತೆರೆದು ನಿಂತು ಮೆರವಣಿಗೆ ಮೂಲಕ ಸಿದ್ದರಾಮಯ್ಯ ಮತಗಟ್ಟೆಗೆ ಬಂದಿದ್ದಾರೆ. ಸಿದ್ದರಾಮಯ್ಯ ಸ್ಟೈಲಾಗಿ ಮತಗಟ್ಟೆಗೆ ಬಂದಿದ್ದು ವಿಶೇಷವಾಗಿತ್ತು. ಮತ ಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎರಡೂ ಹಂತದ ಮತದಾನಕ್ಕೆ ಸಾಕಷ್ಟು ಪ್ರಚಾರ ಮಾಡಿದ್ದೇನೆ. ಈ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮೈಸೂರು, ಚಾಮರಾಜನಗರ, ಬೀದರ್, ಕುಲಬರಗಿಯಲ್ಲಿ ನಾವು ಗೆಲ್ಲುತ್ತೇವೆ ಎಂದರು. ಈ ವೇಳೆ ಮಾಧ‍್ಯಮಗಳು ಕಾಂಗ್ರೆಸ್ ಗೆ ಎಷ್ಟು ಸ್ಥಾನ ಬರಬಹುದು ಎಂದು ಪ್ರಶ್ನೆ ಮಾಡಿವೆ.
ಇದಕ್ಕೆ ಉತ್ತರಿಸಿದ ಸಿಎಂ ಗೌಪ್ಯ ಮತದಾನವಾಗಿರುವುದರಿಂದ ಎಷ್ಟು ಬರಬಹುದು ಎಂದು ಹೇಳಲು ಸಾಧ‍್ಯವಿಲ್ಲ. ಆದರೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ ಎಂದರು. ಸಿದ್ದರಾಮಯ್ಯಗೆ ಮತದಾನ ಮಾಡಲು ಪುತ್ರ ಯತೀಂದ್ರ ಕೂಡಾ ಸಾಥ್ ನೀಡಿದ್ದಾರೆ.