ಮಚ್ಚು, ಲಾಂಗ್ ಹಿಡಿದು ಪೊಲೀಸರ ಕೈಗೆ ಸಿಕ್ಕಬಿದ್ರು
ಮುಖ್ಯರಸ್ತೆಯಲ್ಲಿ ಸಂಚರಿಸೋ ವಾಹನಗಳ ಸವಾರರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಕುಖ್ಯಾತರನ್ನು ಪೊಲೀಸರು ಅಂದರ್ ಮಾಡಿದ್ದಾರೆ.
ಮುಖ್ಯರಸ್ತೆ ಬದಿಯಲ್ಲೇ ಬೈಕ್ ನಿಲ್ಲಿಸಿದ್ದ ಗ್ಯಾಂಗಿನ ಆರು ಜನ ದರೋಡೆಕೋರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಸರಗಳ್ಳತನ ಹಾಗೂ ಬೈಕ್ ಕಳ್ಳತನ ಅಲ್ಲದೇ ದರೋಡೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಖದೀಮರಾದ ಕೋಲಾರದ ಕೂತಾಂಡಹಳ್ಳಿಯ ಧನಂಜಯ್, ವಕ್ಕಲೇರಿಯ ದೀಕ್ಷಿತ, ಗುರುಪ್ರಸಾದ್, ಚಂದ್ರಶೇಖರ್, ಯತೀಶ್, ಬಸವರಾಜ ಬಂಧನಕ್ಕೆ ಒಳಗಾದವರು.
ಕೋಲಾರ ಗ್ರಾಮಾಂತರು ಪೊಲೀಸರು ಕುಖ್ಯಾತ ಖದೀಮರನ್ನು ಬಂಧನ ಮಾಡಿದ್ದಾರೆ.