ಡಿಕೆ ಶಿವಕುಮಾರ್ ಶಿಕ್ಷೆ ಅನುಭವಿಸಲಿ ಎಂದ ಕೆ.ಎಸ್.ಈಶ್ವರಪ್ಪ?

ಗುರುವಾರ, 12 ಸೆಪ್ಟಂಬರ್ 2019 (15:10 IST)
ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹಾಗೂ ಪ್ರಭಾವಿ ಮುಖಂಡ  ಡಿ ಕೆ ಶಿವಕುಮಾರ್ ಬಂಧನಕ್ಕೆ ಜಾತಿ ಬಣ್ಣ ಕಟ್ಟಿದ್ದು ದೊಡ್ಡ ತಪ್ಪು. ಹೀಗಂತ ಸಚಿವರೊಬ್ಬರು ಕಿಡಿಕಾರಿದ್ದಾರೆ.

ಚಿತ್ರದುರ್ಗದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು, ಡಿಕೆಶಿ ಅವರೇ ಹೇಳುತ್ತಿದ್ದರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು. ಹೀಗಾಗಿ ಮುಂದೆ ಅವರಿಗೆ ಜಾಮೀನು ಸಿಗಬಹುದು, ಗೊತ್ತಿಲ್ಲ.

ನ್ಯಾಯಾಂಗ ನಂಬಿರುವ ಕಾಂಗ್ರೆಸ್ ನವರು ಜಾತಿಗೆ ಬಿದ್ದು ಪ್ರತಿಭಟನೆ ಮಾಡಿದ್ದು ಒಳ್ಳೆಯದಲ್ಲ ಎಂದ್ರು.
ತನಿಖೆ ಮಾಡಿದ ತಕ್ಷಣ ಡಿಕೆಶಿ ತಪ್ಪಿತಸ್ಥರಲ್ಲ. ಅವರು ತನಿಖೆ ಮುಗಿಸಿ ಹೊರಬಂದರೆ ನನಗೂ ಖುಷಿ ಎಂದ್ರು.

ಕಳ್ಳನನ್ನ ಕಳ್ಳ ಅನ್ನೋದು ತಪ್ಪಾ? ಕಳ್ಳ ತಾನು ಕಳ್ಳ ಅಲ್ಲ ಅನ್ನೋದನ್ನ ಸಾಬೀತುಪಡಿಸಲಿ. ಇಡಿ ಬಂಧನದಿಂದ ಡಿಕೆಶಿ  ಹೊರ ಬರಲಿ ನಮಗೂ ಸಂತೋಷವಿದೆ. ಅಲ್ಲಿ‌ ಡಿಕೆಶಿ ತಪ್ಪಿತಸ್ಥರಾದರೆ ಶಿಕ್ಷೆ ಅನುಭವಿಸಲಿ ಅಂತ ಈಶ್ವರಪ್ಪ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ