ಸಿನಿಮಾ ಮಾಡೋ ಹುಚ್ಚಿಗೆ ಸುಂದರ ಪತ್ನಿಗೆ ಹೀಗಾ ಮಾಡೋದು

ಭಾನುವಾರ, 26 ಜನವರಿ 2020 (22:05 IST)
ನಾನು ಸಿನಿಮಾ ಮಾಡಬೇಕಿದೆ. ಒಳ್ಳೆ ಹೆಸರು ಗಳಿಸಬೇಕಿದೆ. ಹೀಗಾಗಿ ನೀನು ಅದನ್ನು ತರಲೇಬೇಕು ಅಂತ ಸುಂದರವಾಗಿದ್ದ ಹೆಂಡತಿಗೆ ಒತ್ತಾಯಿಸುತ್ತಿದ್ದ ಗಂಡನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಸುಂದರವಾಗಿದ್ದ ಪತ್ನಿಗೆ ಇದೀಗ ಅವಳ ಸೌಂದರ್ಯ ಹಾಗೂ ಪತಿಯ ಸಿನಿಮಾ ಹುಚ್ಚು ಮುಳುವಾಗಿದೆ.

ಗೃಹಿಣಿ ಜಯಶ್ರೀ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿ ಸುಬ್ರಮಣಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸಿನಿಮಾ ಮಾಡ್ತೀನಿ ಅಂತ ಹೇಳ್ತಿದ್ದ ಗಂಡ, ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.

ಆನೇಕಲ್ ನ ಸರ್ಜಾಪುರದಲ್ಲಿ ಘಟನೆ ನಡೆದಿದ್ದು, ಪತ್ನಿಯನ್ನು ಪತಿಯೇ ಅನುಮಾನದಿಂದ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ