ಬೆಂಗಳೂರು: ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ ಬೆನ್ನಲ್ಲೇ ಎಚ್ಚೆತ್ತಾ ಸರ್ಕಾರ ಜಿಲ್ಲೆಯಲ್ಲಿರುವ ತೆರೆದ ಬೋರ್ ವೆಲ್ ಸರ್ವೆ ನಡೆಸಿ, ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಸೂಚಿಸಿದ್ದಾರೆ
ಬುಧವಾರ ಸಂಜೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು 20 ಗಂಟೆಗಳ ಸತತ ಕಾರ್ಯಚರಣೆಗಳ ಬಳಿಕ ರಕ್ಷಿಸಲಾಗಿದೆ. ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ್ ಶ್ಲಾಘಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಂಬಿ ಪಾಟೀಲ್ ಅವರು, ಜಮೀನಿನಲ್ಲಿ, ಮನೆ ಬಳಿ, ಉದ್ಯಾನದಲ್ಲಿ ಮುಚ್ಚದೆ ಹಾಗೆಯೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ಜಿಲ್ಲೆಯಾದ್ಯಂತ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ನಿರ್ದೇಶಿಸಿದರು.
ಈ ಮೂಲಕ ಸಣ್ಣ ಸಣ್ಣ ಮಕ್ಕಳ ಸಾವು ಬದುಕಿಗೆ ಕಾರಣವಾಗುತ್ತಿರುವ ತೆರೆದ ಕೊಳವೆ ಬಾವಿಯನ್ನು ಹಾಗೆ ಬಿಡುವವರ ವಿರುದ್ಧ ಅವರು ಜಿಲ್ಲೆಯಾದ್ಯಂತ ಸಮರ ಸಾರಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ
Photo Courtesy X
ಹೀಗಾಗದಂತೆ ಎಚ್ಚರಿಕೆ ವಹಿಸುವಂತೆ ಪೋಷಕರು ಮತ್ತು ರೈತರಿಗೆ ಸಚಿವರು ಸಲಹೆ ನೀಡಿದ್ದಾರೆ.