ಹುಚ್ಚು ನಾಯಿ ದಾಳಿ: 10 ಜನರಿಗೆ ಗಾಯ

ಸೋಮವಾರ, 16 ಜುಲೈ 2018 (18:32 IST)
ಹುಚ್ಚು ನಾಯಿ ದಾಳಿಯಿಂದ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಹುಚ್ಚು ಹಿಡಿದಿರುವ ನಾಯಿಯೊಂದು ಇಂದು ಮಹಿಳೆಯರು, ಯುವಕರು, ಮಕ್ಕಳಿಗೆ ಮನಬಂದಂತೆ ಕಚ್ಚಿಗಾಯಗೊಳಿಸಿದೆ.


ಹುಚ್ಚು ನಾಯಿ ದಾಳಿಯಿಂದ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಗದಗ ತಾಲೂಕಿನ ಶಾಗೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಹುಚ್ಚು ಹಿಡಿದಿರುವ ನಾಯಿಯೊಂದು ಇಂದು ಮಹಿಳೆಯರು, ಯುವಕರು, ಮಕ್ಕಳಿಗೆ ಮನಬಂದಂತೆ ಕಚ್ಚಿಗಾಯಗೊಳಿಸಿದೆ.

ಇದರಲ್ಲಿ ಪಕ್ಕಿರಗೌಡ, ವಿಠ್ಠಲ್, ಪಾಲಾಕ್ಷೀ, ಸಂಗನಗೌಡ ಎಂಬ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಸಣ್ಣ-ಪುಟ್ಟ ಗಾಯಾಳುಗಳಿಗೆ ಶಾಗೋಟಿ ಹಾಗೂ ಹುಲಕೋಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಚ್ಚು ನಾಯಿ ಹಾವಳಿಗೆ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ನಾಯಿ ಸೆರೆಹಿಡಿಯಲು ಸ್ಥಳೀಯರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ