ಮೂಗು ಚುಚ್ಚಿದ ನೋವು ಮತ್ತು ಗಾಯ ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ
ಸೋಮವಾರ, 9 ಜುಲೈ 2018 (06:25 IST)
ಬೆಂಗಳೂರು : ಮೂಗಿಗೆ ಮೂಗುತಿ ಹಾಕಿಸಿಕೊಳ್ಳುವುದು ಕೇವಲ, ಶೋಕಿಗಾಗಿ ಅಥವಾ ಟ್ರೆಂಡ್ ಗಾಗಿ ಅಲ್ಲ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಆದ್ದರಿಂದ ಮಹಿಳೆಯರು ಮೂಗುತಿ ಧರಿಸಲು ಇಷ್ಟಪಡುತ್ತಾರೆ ಹಾಗಾಗಿ ಮೂಗು ಚುಚ್ಚಿಕೊಳ್ಳುತ್ತಾರೆ. ಆದರೆ ಇದರ ನೋವು ಮತ್ತು ಗಾಯ ಬೇಗ ಗುಣವಾಗಬೇಕು ಎಂದರೆ ನೀವು ಈ ಮನೆಮದ್ದನ್ನು ಬಳಕೆ ಮಾಡಿ.
ಅರಿಶಿನದಲ್ಲಿ ರೋಗ ನಿರೋಧಕ ಮತ್ತು ನೋವು ನಿವಾರಿಸುವ ಕೆಲವು ಗುಣಗಳಿವೆ. ಎಣ್ಣೆಯನ್ನು ಬಿಸಿ ಮಾಡಿ. ಮತ್ತು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ, ಹತ್ತಿಯ ತುಂಡುಗಳನ್ನು ಬಳಸಿ ನಿಮ್ಮ ಮೂಗು ಚುಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ. 5 ರಿಂದ 10 ನಿಮಿಷ ಬಿಟ್ಟು ಹದ ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಒಂದು ಬಾರಿ ಇದನ್ನು ಬಳಸಿ. ಇದರಿಂದ ನೋವು ಮತ್ತು ಗಾಯ ಬೇಗ ಗುಣವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ