ಮಹಾ ಹೋರಾಟಗಾರರಿಗೆ ಸ್ವಾತಂತ್ರ ದಿನಾಚರಣೆ ಮಹಾ ಗಿಫ್ಟ್

ಮಂಗಳವಾರ, 14 ಆಗಸ್ಟ್ 2018 (19:27 IST)
ಮಹದಾಹಿ ಹೋರಾಟಗಾರರಿಗೆ ಸ್ವಾತಂತ್ರ ದಿನಾಚರಣೆಯ ಗಿಫ್ಟ್ ದೊರಕಿದೆ. 13.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಮಹದಾಯಿ ನೀರು ಬಳಸಲು ನ್ಯಾಯಾಧೀಕರಣ ಒಪ್ಪಿಗೆ ಕೊಟ್ಟು ತೀರ್ಪು ನೀಡಿದೆ.

ನ್ಯಾಯಾಧೀಕರಣದ ತೀರ್ಪು ಈ ಭಾಗದ ಜನರಿಗೆ ಸಂತಸ ತಂದಿದೆ. ಕುಡಿಯುವ ನೀರಿಗಾಗಿ ರಾಜ್ಯ ಸರಕಾರ 7.5 ಟಿಎಂಸಿ ನೀರನ್ನು ಕೊಡಬೇಕೆಂದು ತನ್ನ ವಾದ ಮಂಡಿಸಿತ್ತು. ನ್ಯಾಯಮೂರ್ತಿ ಜೆ.ಎಂ.ಪಾಂಚಾಲ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯದ ಮನವಿಗೆ ಸ್ಪಂದಿಸಿ ಕುಡಿಯುವ ಉದ್ದೇಶಕ್ಕೆ 4 ಟಿಎಂಸಿ, ಮಹದಾಯಿ ಅಚ್ಚುಕಟ್ಟು ಪ್ರದೇಶದಲ್ಲಿ ಇತರೆ ಬಳಕೆಗೆ 1.5 ಟಿಎಂಸಿ ಹಾಗೂ 8.02 ಟಿಎಂಸಿ ಜಲ ವಿದ್ಯುತ್ ಗಾಗಿ ಕರ್ನಾಟಕ ರಾಜ್ಯ ಬಳಸಬಹದೆಂದು ಮಹತ್ತರ ತೀರ್ಪು ನೀಡಿದೆ.

ಈ ತೀರ್ಪು ಮೂಲಕ ರಾಜ್ಯಕ್ಕೆ ಪ್ರತಿಶತ ನೂರರಷ್ಟು ಅಲ್ಲದಿದ್ದರೂ ಭಾಗಶಃ ಜಯ ದೊರೆತಂತೆ ಆಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ