ರಾಜ್ಯದ ಕಾರ್ಮಿಕರಿಗೆ ಅನ್ನ ಕೊಡದ ಮಹಾರಾಷ್ಟ್ರ ಸರಕಾರ

ಶನಿವಾರ, 9 ಮೇ 2020 (15:45 IST)
ರಾಜ್ಯದ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಅನ್ನಕ್ಕೆ ಪರದಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಆಹಾರ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ ಇಟ್ಟಿಗೆ ಕಾರ್ಮಿಕರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ 20 ಜನ ಕೂಲಿ ಕಾರ್ಮಿಕರಿಗೆ ಮಹಾರಾಷ್ಟ್ರ ಸರ್ಕಾರ ಊಟದ ವ್ಯವಸ್ಥೆ ಕಲ್ಪಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕರಾಡ್ ತಾಲ್ಲೂಕಿನ ಉಮರಜ್ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ ಇದಾಗಿದೆ. ಹೋಂ ಕ್ವಾರಂಟೈನ್ ಗೆ ಒಳಗಾಗಿರುವ ಮಾಲಿಕನು ಕಾರ್ಮಿಕರಿಗೆ ಸಂಬಳ ನೀಡಿಲ್ಲ.

ಅತ್ತ ಹಣವೂಇಲ್ಲ ಇತ್ತ ಊಟವೂ ಇಲ್ಲ ಅಂತ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.  

ಕಾರ್ಮಿಕರ ತವರು ಪ್ರವೇಶಕ್ಕೆ ಒಪ್ಪಿಗೆಯನ್ನು ವಿಜಯಪುರ ಜಿಲ್ಲಾಡಳಿತ ನೀಡಿದೆ. ಆದರೆ ಆರೋಗ್ಯವಾಗಿ ಇದ್ದರೂ ಆನ್ ಲೈನ್ ಪಾಸ್ ರಿಜಕ್ಟ್ ಮಾಡಿದೆ ಮಹಾರಾಷ್ಟ್ರ ಸರ್ಕಾರ ಎನ್ನಲಾಗಿದೆ.

ಹೀಗಾಗಿ ನಮಗೆ ನಮ್ಮೂರಿಗೆ ಹೋಗಲು ಪಾಸ್ ಕೊಡಿ ಎಂದು ಬಡ ಕಾರ್ಮಿಕರು ಗೋಳಿಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ