ಲಾಕ್ ಡೌನ್ ವೇಳೆ ಮನೆಯಲ್ಲೇ ಸಿಂಪಲ್ ಆಗಿ ಐಸ್ ಕ್ರೀಂ ಮಾಡಿ

ಶನಿವಾರ, 9 ಮೇ 2020 (08:45 IST)
ಬೆಂಗಳೂರು: ಲಾಕ್ ಡೌನ್ ವೇಳೆ ಹೊರಗೆ ಹೋಗಿ ಐಸ್  ಕ್ರೀಂ ತಿನ್ನಲೂ ಸಾಧ‍್ಯವಾಗುತ್ತಿಲ್ಲ ಎಂಬ ಬೇಸರವೇ? ಹಾಗಿದ್ದರೆ ನಿಮ್ಮ ಮಕ್ಕಳಿಗೆ ಮನೆಯಲ್ಲೇ ಸಿಂಪಲ್ ಆಗಿ ಐಸ್ ಕ್ರೀಂ ಮಾಡಿ ಕೊಡಿ.

 

ಇದಕ್ಕೆ ಬೇಕಾಗಿರುವುದು ಸ್ವಲ್ಪ ಹಾಲು, ಸಕ್ಕರೆ, ಬಾಳೆ ಹಣ್ಣು, ಯಾವುದಾದರೂ ಬಾರ್ ಚಾಕಲೇಟ್.

ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಬಿಲ್ಲೆಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ. ಇದಕ್ಕೆ ಸ್ವಲ್ಪ ಹಾಲು, ಸಕ್ಕರೆ ಹಾಗೂ ಬಾರ್ ಚಾಕಲೇಟ್ ತುಂಡು ಮಾಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಕೆಲವು ಕಾಲ ಫ್ರೀಝರ್ ನಲ್ಲಿಟ್ಟು ಸ್ವಲ್ಪ ಗಟ್ಟಿಯಾದ ಮೇಲೆ ಮೇಲಿನಿಂದ ಅಲಂಕಾರಕ್ಕೆ ಬೇಕಾದರೆ ಕೊಂಚ ಒಣ ದ್ರಾಕ್ಷಿ, ಗೋಡಂಬಿ ಅಥವಾ ಬಾದಾಮಿ ಉದುರಿಸಿಕೊಂಡು ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ