ಪಾದರಾಯನಪುರದಲ್ಲಿ ಮತ್ತೆ ಪೊಲೀಸರ ಜೊತೆ ಪುಂಡರ ಪುಂಡಾಟ

ಶನಿವಾರ, 9 ಮೇ 2020 (10:13 IST)

ಬೆಂಗಳೂರು : ಪಾದರಾಯನಪುರದಲ್ಲಿ ಕಂಪ್ಲೀಟ್ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಪೊಲೀಸರ ಜೊತೆ ಮತ್ತೆ ಕೆಲ ಪುಂಡರು ಪುಂಡಾಟವಾಡುತ್ತಿದ್ದಾರೆ.

 

ಪಾದರಾಯನಪುರದಲ್ಲಿ ಮತ್ತೆ 7 ಜನರಿಗೆ ಕೊರೊನಾ ಸೋಂಕು. ನಿನ್ನೆ ರಾತ್ರಿ ನಾಲ್ವರು , ಇಂದು ಬೆಳಿಗ್ಗೆ ಮೂವರಿಗೆ ಸೋಂಕು ದೃಢವಾಗಿದೆ. ಇಷ್ಟಾದರೂ ಪಾದರಾಯನಪುರದಲ್ಲಿ ಎಚ್ಚೆತ್ತುಕೊಳ್ಳದ ಜನತೆ ಮಾಸ್ಕ್ ಧರಿಸದೆ ಅನಗತ್ಯವಾಗಿ ಓಡಾಡುತ್ತಿದ್ದಾರೆ ಎನ್ನಲಾಗಿದೆ. ಆದಕಾರಣ ಪಾದರಾಯನಪುರ ಕಂಪ್ಲೀಟ್ ಲಾಕ್ ಡೌನ್ ಮಾಡಲಾಗಿದೆ.
 

ಈ ಹಿನ್ನಲೆಯಲ್ಲಿ ಹೊರಗೆ ಹೋಗಲಾಗದೆ ಪರದಾಡುತ್ತಿದ್ದ ಕೆಲ ಪುಂಡರು ಹೊರಗೆ ಹೋಗಲು ಬಿಡುವಂತೆ ಪೊಲೀಸರ ಜೊತೆ ವಾಗ್ವಾದಕ್ಕೀಳಿದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ