ಯುವತಿಯರ ಅರೆಬೆತ್ತಲೆ ಫೋಟೋ ಪಡೆದು ವಂಚಿಸುತ್ತಿದ್ದವನ ಸೆರೆ
ಯುವತಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದ 28 ವರ್ಷದ ವ್ಯಕ್ತಿ ರೂಪದರ್ಶಿ ಮಾಡುವುದಾಗಿ ಯುವತಿಯರಿಗೆ ಆಮಿಷವೊಡ್ಡುತ್ತಿದ್ದ. ಬಳಿಕ ಅವರಿಂದ ಅರೆ ನಗ್ನ, ಗ್ಲಾಮರಸ್ ಫೋಟೋಗಳನ್ನು ಪಡೆದುಕೊಳ್ಳುತ್ತಿದ್ದ.
ಈ ಫೋಟೋಗಳಿಗೆ ಅಶ್ಲೀಲ ಫೋಟೋಗಳನ್ನು ಜೋಡಿಸಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ರೀತಿ 20 ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ಈಗ ಸಂತ್ರಸ್ತ ಯುವತಿಯೊಬ್ಬಳ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.