ಸಾಲ ಪಡೆದ ಮಹಿಳೆಯ ಅಶ್ಲೀಲ ವಿಡಿಯೋ ರವಾನಿಸಿದ ವ್ಯಕ್ತಿ!

ಬುಧವಾರ, 27 ಏಪ್ರಿಲ್ 2022 (08:50 IST)
ಬೆಂಗಳೂರು: ಸಾಲ ಪಡೆದ ಮಹಿಳೆಯ ಅಶ್ಲೀಲ ವಿಡಿಯೋವನ್ನು ರವಾನಿಸಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಕರ್ನಾಟಕ ಮೂಲದ 19 ವರ್ಷದ ವ್ಯಕ್ತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ.

ಸಂತ್ರಸ್ತೆ 9,000 ರೂ. ಸಾಲ ಪಡೆದಿದ್ದಳು. ಅದನ್ನು ವಾಪಸ್ ನೀಡದ ಕಾರಣಕ್ಕೆ ಆರೋಪಿ ಮಹಿಳೆಯ ಎಡಿಟ್ ಮಾಡಿದ ಅಶ್ಲೀಲ ವಿಡಿಯೋವನ್ನು ವ್ಯಾಟ್ಸಪ್ ನಲ್ಲಿ ರವಾನಿಸಿದ್ದ. ಇದರಿಂದ ಶಾಕ್ ಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ