ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಜೀವಕೊನೆಗಾಣಿಸಿದ ಯುವಕ

ಸೋಮವಾರ, 1 ಮಾರ್ಚ್ 2021 (10:07 IST)
ಬೆಂಗಳೂರು: ಸ್ನೇಹಿತನ ಮೇಲಿನ ಬೇಸರಕ್ಕೆ ಯುವಕನೊಬ್ಬ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಸ್ವಯಂ ಹತ್ಯೆಗೆ ಶರಣಾದ ಘಟನೆ ಬಾಗಲೂರಿನಲ್ಲಿ ನಡೆದಿದೆ.


28 ವರ್ಷದ ಮಂಜುನಾಥ್ ಎಂಬ ಯುವಕ ತನ್ನ ಸ್ನೇಹಿತ ಪಡೆದ ಸಾಲ ವಾಪಸ್ ಮಾಡಿಲ್ಲ ಎಂದು ಆರೋಪಿಸಿ ಜೀವಕೊನೆಗಾಣಿಸಿಕೊಂಡಿದ್ದಾನೆ. ಸ್ನೇಹಿತನ ಜೊತೆ ಪಾಲುದಾರಿಕೆಯಲ್ಲಿ ಮೊಬೈಲ್ ಶೋ ರೂಂ ಇಟ್ಟುಕೊಂಡಿದ್ದ ಮಂಜುನಾಥ್ ಅಂಗಡಿ ನಷ್ಟವಾಗಿ ಬಂದ್ ಮಾಡಬೇಕಾದ ಸ್ಥಿತಿ ಬಂತು. ಈ ವೇಳೆ 11 ಲಕ್ಷ ರೂ. ಸ್ನೇಹಿತ ನೀಡಬೇಕಿತ್ತು. ಆದರೆ ಇದುವರೆಗೆ ನೀಡದೇ ಇದ್ದರಿಂದ ಮನನೊಂದು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ