ತಂಗಿಯ ಮೇಲೆ ಕಣ್ಣು ಹಾಕಿದ್ದಕ್ಕೆ ಸ್ನೇಹಿತನಿಗೆ ಹೀಗಾ ಮಾಡೋದು?!

ಶುಕ್ರವಾರ, 29 ಅಕ್ಟೋಬರ್ 2021 (10:00 IST)
ಕಲಬರಗಿ: ತಂಗಿಯ ಮೇಲೆ ಕಣ್ಣು ಹಾಕಿದ್ದಕ್ಕೆ ಅಣ್ಣ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಕಲಬರಗಿಯಲ್ಲಿ ನಡೆದಿದೆ.

ಆಕಾಶ್ ಎಂಬಾತನ ಮೇಲೆ ಸ್ನೇಹಿತ ಶ್ರೀನಿಧಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಶ್ರೀನಿಧಿ ತಂಗಿಯನ್ನನು ಪ್ರೀತಿಸಿದ್ದೇ ಈ ಕೃತ್ಯಕ್ಕೆ ಕಾರಣ.

ಶ್ರೀನಿಧಿಯ ತಂಗಿಯನ್ನು ಆಕಾಶ್ ಪ್ರೀತಿಸಿದ್ದಲ್ಲದೆ, ಆಕೆಯೊಂದಿಗೆ ಓಡಿ ಹೋಗಿದ್ದ. ಹೀಗಾಗಿ ಉಪಾಯವಾಗಿ ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಜೀವ ತೆಗೆದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ