19 ವರ್ಷದ ಅಂಗವಿಕಲ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಹೂಡಿ ಪ್ರದೇಶದ ಬಳಿಯಿರುವ ಬಸವಣ್ಣ ನಗರ ನಿವಾಸಿ, ದಿನಗೂಲಿ ಕಾರ್ಮಿಕನಾಗಿರುವ ಕಾಮುಕ ರವಿ, ಸಹೋದರಿಯ ಗೆಳತಿ ಮನೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ.
ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿಯ ಪ್ರಕಾರ, ಪುತ್ರಿ ತನ್ನ ಗೆಳತಿಯನ್ನು ನೋಡಲು ರವಿ ಮನೆಗೆ ಹೋಗಿದ್ದಳು. ಆದರೆ, ಮನೆಯಲ್ಲಿ ಆಕೆಯಿರಲಿಲ್ಲ. ಸಹೋದರ ರವಿ ಉಪಸ್ಥಿತನಿದ್ದನು. ಮನೆಯಲ್ಲಿ ಯಾರು ಇಲ್ಲದಿರುವುದು ಕಂಡು ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತುಂಬಾ ಹೊತ್ತಾದರು ಪುತ್ರಿ ಬಾರದಿದ್ದರಿಂದ ನಾನೇ ರವಿಯ ಮನೆಗೆ ಹೋಗಿ ನೋಡಿದಾಗ ಪುತ್ರಿಯ ಮೇಲೆ ಅತ್ಯಾಚಾರವಾಗಿರುವುದು ಕಂಡು ಬಂದಿದೆ.