ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ : ವಿಜಯೇಂದ್ರ
ಮಂಡ್ಯದ ಹೊಳಲು ಗ್ರಾಮದಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಯಾವುದೇ ಜಿಲ್ಲೆಯ ಚುನಾವಣೆ ಉಸ್ತುವಾರಿ ಕೊಟ್ರು ನಿಭಾಯಿಸಲಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಂಡ್ಯ ಜಿಲ್ಲೆ ಜನ ಬೇಸತ್ತಿದ್ದಾರೆ.
ಬಿಜೆಪಿ ಪರವಾದ ಭರವಸೆ ಜನರು ತೋರುತ್ತಿದ್ದಾರೆ. ಕೆ.ಆರ್ ಪೇಟೆ ಗೆಲುವು ಮುಂದಿನ ವಿಧಾನಸಭೆ ಗೆಲ್ಲಲು ಪ್ರೇರಣೆ ಎಂದರು.
ಕಾಂಗ್ರೆಸ್ ಕಿವಿ ಮೇಲೆ ಹೂ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮೂಡಿಸಲಿದ್ದಾರೆ. ಅವರ ನಡವಳಿಕೆಗೆ ಜನರು ಉತ್ತರ ನೀಡಲಿದ್ದಾರೆ.