ಒಂದೇ ರಾತ್ರಿಗೆ ಗಡಗಡ ನಡುಗಿದ ಮಂಡ್ಯ
ಒಂದೇ ರಾತ್ರಿಗೆ ಮಂಡ್ಯದ ಜನರು ಗಡಗಡ ನಡುಗಿ ಹೋಗಿದ್ದಾರೆ.
ಆ ಭಾಗದ ಗೋಳನ್ನು ಮತ್ತು ಪರದಾಟವನ್ನು ನೋಡಿ ರಾಜ್ಯದ ಜನರು ಬೆಚ್ಚಿ ಬಿದ್ದು, ನೆರವಿನ ಹಸ್ತ ಚಾಚಿದ್ದರು.
ಅಲ್ಲಿಂದ ಶುರುವಾದ ಕಂಟಕ ಮತ್ತೆ ಮಳೆರಾಯ ಮಂಡ್ಯ ಜಿಲ್ಲೆಯ ಭಾಗವನ್ನು ಆವರಸಿಕೊಂಡಿದೆ.
ಮಂಡ್ಯ ಸುತ್ತಮುತ್ತಲು ರಾತ್ರಿ ಇಡೀ ಧಾರಕಾರ ಮಳೆ ಸುರಿದಿದೆ. ಕೃಷ್ಣರಾಜ ಪೇಟೆಯ ಅಗ್ರಹಾರ - ಬಾಚಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಮಳೆಯ ಆರ್ಭಟಕ್ಕೆ ನೂರಾರು ಎಕರೆ ಭತ್ತ, ಕಬ್ಬು ಬೆಳೆ ನಾಶವಾಗಿದೆ.