ಕೇರಳ ಸಿಎಂ ಭೇಟಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಂದ್: ಬಣಗುಡುತ್ತಿವೆ ರಸ್ತೆಗಳು
ಶನಿವಾರ, 25 ಫೆಬ್ರವರಿ 2017 (07:53 IST)
ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಕೋಮು ಸೌಹಾರ್ದ ರ್ಯಾಲಿಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಭಾಗವಹಿಸುವಿಕೆಯನ್ನ ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ಇವತ್ತು ದಕ್ಷಿಣ ಕನ್ನಡ ಜಿಲ್ಲಾ ಬಂದ್`ಗೆ ಕರೆ ನೀಡಿವೆ.ಹೀಗಾಗಿ, ಬೆಳಗ್ಗೆಯಿಂದಲೇ ಜಿಲ್ಲೆ ಸ್ತಬ್ಧವಾಗಿದೆ. ಖಾಸಗಿ ಬಸ್ ಸಂಚಾರ ಸ್ಥಗಿತವಾಗಿದ್ದು, ವಾಹನಗಳ ಸಂಚಾರ ವಿರಳವಾಗಿದೆ. ತಲಪಾಡಿ ಬಳಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಟ ನಡೆದಿದೆ.
ಸಿಪಿಎಂ ಆಡಳಿತವಿರುವ ಕೇರಳದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಬಂದ್ ಕರೆ ನೀಡಲಾಗಿದೆ. ಹಿಂದೂ ಪರ ಸಂಘಟನೆನೆಗಳು ಬಂದ್`ಗೆ ಬೆಂಬಲ ಸೂಚಿಸಿವೆ.
ಈ ಮಧ್ಯೆ, ಯಾವುದೇ ವಿರೋಧವಿದ್ದರೂ ಮಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಹೀಗಾಗಿ, ಯಾವುದೇಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.