Mangaluru Suhas Shetty murder: ಸುಹಾಸ್ ಶೆಟ್ಟಿ 50 ಲಕ್ಷ ರೂ ಫಂಡಿಂಗ್ ಬಂತು: ಮುಸ್ಲಿಂ ಮುಖಂಡರ ಮೇಲೆಯೇ ಡೌಟ್
ಸುಹಾಸ್ ಶೆಟ್ಟಿ ಹತ್ಯೆಗೆ 5 ಲಕ್ಷ ರೂ. ಸುಪಾರಿ ನೀಡಲಾಗಿತ್ತು ಎಂದು ಈ ಮೊದಲು ಪೊಲೀಸರು ಹೇಳಿದ್ದರು. ಆದರೆ ಇದೀಗ ತನಿಖೆ ನಡೆಸುತ್ತಿದ್ದಂತೇ ಕೇವಲ 5 ಲಕ್ಷ ರೂ. ಅಲ್ಲ, 50 ಲಕ್ಷ ರೂ. ಹಣ ಹರಿದಾಡಿದೆ ಎಂಬ ಸುಳಿವು ಸಿಕ್ಕಿದೆ.
ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ 3 ಲಕ್ಷ ರೂ. ಮುಂಗಡ ಹಣ ನೀಡಿಯಾಗಿತ್ತು. ಆದರೆ ಸುಹಾಸ್ ಹತ್ಯೆ ನಡೆಸಲು ಪಣ ತೊಟ್ಟಿದ್ದ ಮುಸ್ಲಿಮರು 50 ಲಕ್ಷ ರೂ. ಫಂಡಿಂಗ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿಯೇ ಇಷ್ಟೊಂದು ಹಣ ಸಹಾಯ ಮಾಡಿದ ಮುಖಂಡರು ಯಾರು ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಪ್ರಭಾವೀ ವ್ಯಕ್ತಿಗಳೇ ಸಹಾಯ ಮಾಡಿರಬಹುದು ಎಂಬ ಸಂಶಯವಿದೆ. ಸುಹಾಸ್ ಹತ್ಯೆಗೆ ಒಂದು ಮೀನಿನ ಟೆಂಪೊ, ಸ್ವಿಫ್ಟ್ ಕಾರು ಬಳಸಲಾಗಿತ್ತು. ಅಲ್ಲದೆ ಆರೋಪಿಗಳಿಗೆ 5 ಲಕ್ಷ ರೂ. ನೀಡುವುದಾಗಿ ಸುಪಾರಿ ನೀಡಲಾಗಿತ್ತು.