ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ

ಶುಕ್ರವಾರ, 10 ಆಗಸ್ಟ್ 2018 (14:09 IST)
ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಬೇಕು. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದು, ರೈತರು ಹಾಗೂ ಮಹಿಳೆಯರು  ಪ್ರಯೋಜನ ಪಡೆದುಕೊಳ್ಳಬೇಕು. ಹೀಗಂತ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಆನೇಕಲ್‍ನ ಚಂದಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ರೈತರು ಪ್ರತಿಯೊಂದಕ್ಕೂ ಪ್ರಕೃತಿ ಮೇಲೆ ಅವಲಂಬಿತವಾಗಿದ್ದು ಅತಿವೃಷ್ಟಿ -ಅನಾವೃಷ್ಟಿಗಳ ಮೂಲಕ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ರೈತರ ಅಭಿವೃದಿಗಾಗಿ ಸಾಲ ಮನ್ನಾ ಮಾಡುವ ಮೂಲಕ ಕೊಂಚ ನೆಮ್ಮದಿ ತಂದಿದೆ.

ರೈತರ ಉದ್ದಾರಕ್ಕೆ ಸಾಲ ಮನ್ನಾ ಒಂದೇ ಪರಿಹಾರವಲ್ಲ. ಬದಲಾಗಿ ಬೇರೆ ಪರ್ಯಾಯ ಯೋಜನೆಗಳನ್ನ ಸರ್ಕಾರಗಳ ನೀಡುವ ಮೂಲಕ ರೈತರ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಅಲ್ಲದೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್ ವತಿಯಿಂದ ಸುಮಾರು 8 ಸಾವಿರ ಕೋಟಿ ಸಾಲವನ್ನ ರೈತರಿಗೆ ನೀಡಿದ್ದೇವೆ. ಆ ಮೂಲಕ ರೈತರ ಸ್ವಾವಲಂಬಿ ಜೀವನಕ್ಕೆ ನಮ್ಮ ಕೈಲಾದ ಸಹಾಯವನ್ನ ನಾವು ಮಾಡುತ್ತಿದ್ದೇವೆ ಎಂದು ವಿರೇಂದ್ರ ಹೆಗ್ಗಡೆ ತಿಳಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ