ಪಂಚನಾಮೆ ಮತ್ತು ಅಸ್ತಿ ವಿಷಯವಾಗಿ ಮಧ್ಯವರ್ತಿಗಳಾದ ಪೋಲಿಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ರೈತರು, ಶಾಸಕ ಪ್ರತಿಭಟನೆ ನಡೆಸಿದ್ದಾರೆ.
ಪಂಚನಾಮೆ ಮತ್ತು ಅಸ್ತಿ ವಿಷಯವಾಗಿ ಮಧ್ಯವರ್ತಿಗಳಾದ ಪೋಲಿಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ರೈತರು, ಶಾಸಕ ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ಬಸವಕಟ್ಟಿ ರೈತರು ಮತ್ತು ಹಾವೇರಿ ಶಾಸಕ ನೇಹರು ಓಲೆಕಾರ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ಕೆಲವು ರೈತ ಕಾರ್ಯಕರ್ತರು, ಶಾಸಕ ನೆಹರು ಓಲೆಕಾರ್ ಜಿಲ್ಲಾವರಿಷ್ಠಾಧಿಕಾರಿಗೆ ಮನವಿ ನೀಡಿದ್ರು.
ಹಾವೇರಿ ಶಾಸಕ ಓಲೇಕಾರ, ಜಿಲ್ಲೆಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ವರ್ತನೆ ಮಾಡ್ತಿದ್ದಾರೆ. ಎಲ್ಲ ವಿಷಯಗಳಲ್ಲೂ ಅಧಿಕಾರಿಗಳು ಬಡವರ ಪರವಾಗಿ ನಿಲ್ಲದೇ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ. ರೈತರ ವಿರುದ್ಧ ಪೊಲೀಸರು, ಅಧಿಕಾರಿಗಳು ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಕೃತ್ಯಕ್ಕೆ ಕಾಂಗ್ರೆಸ್ ನವರ ಕುಮ್ಮಕ್ಕು ಇದೆ ಎಂದು ದೂರಿದರು. ಅಕ್ರಮ ಮರಳು ದಂಧೆಯಲ್ಲಿಯು ಕೂಡ ಅಧಿಕಾರಿಗಳ ಪಾತ್ರವಿದೆ ಎಂದು ಆರೋಪಿಸಿದ್ರು. ಕೂಡಲೇ ಜಿಲ್ಲಾ ವರಿಷ್ಠಾಧಿಕಾರಿಗಳು ಡಿವೈಎಸ್ಪಿ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ರೈತ ಕಾರ್ಯಕರ್ತರೊಂದಿಗೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.