ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಬೃಹತ್ ಮತದಾನ ಜಾಗೃತಿ

ಶುಕ್ರವಾರ, 14 ಏಪ್ರಿಲ್ 2023 (12:01 IST)
ಚಿಕ್ಕನಾಯಕನಹಳ್ಳಿ : ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಎಂಬುದನ್ನು ನಾವೆಂದು ಮರೆಯಬಾರದು, ಯುವ ಮತದಾರರು ಮತದಾನದ ಮಹತ್ವವನ್ನು ತಿಳಿದು ಪ್ರಜಾಪ್ರಭುತ್ವದ ಉಳಿವಿಗಾಗಿ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ವಸಂತ್ ಕುಮಾರ್ ಅವರು ತಿಳಿಸಿದರು.
 
ವಿಧಾನಸಭಾ ಚುನಾವಣೆ-2023* ರ ಅಂಗವಾಗಿ ಮತದಾನ ಜಾಗೃತಿಗಾಗಿ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸ್ವೀಪ್ ಸಮಿತಿ* ವತಿಯಿಂದ ಹುಳಿಯಾರು ಪಟ್ಟಣ & ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಜಾಗೃತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಸುರೇಶ್ ಮಾತನಾಡಿ, ಚುನಾವಣೆಯನ್ನು ಎಲ್ಲರೂ ಹಬ್ಬದಂತೆ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ವಿನೂತನವಾಗಿ ಸ್ವೀಪ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನ ಮಾಡಿ ಪ್ರಜಾಪ್ರಭುತ್ವದ ಹೇಳಿಗೆಗೆ ಪಾತ್ರರಾಗೋಣ ಎಂದರು.

ತಾಲ್ಲೂಕಿನ ಮತ್ತಿಘಟ್ಟ,ಅರೇನಹಳ್ಳಿ ಗೇಟ್,ಲಕ್ಷ್ಮೀಪುರು, ಗೋಪಾಲ್ ಪುರ, ತಿಮ್ಲಾಪುರ, ಹುಳಿಯಾರು ಪಟ್ಟಣದವರೆಗೆ ಈ ಒಂದು ಬೃಹತ್ ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಆಚರಿಸಲಾಗಿದೆ.

ತಾಲ್ಲೂಕು ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರವರು ಯಶಸ್ವಿಗೊಳಿಸಿದ್ದಾರೆ. ಇದೇ ರೀತಿ ಎಲ್ಲರೂ ಮತದಾನ ಜಾಗೃತಿ ತಾಲೂಕಿನಲ್ಲಿ ಶೇಕಡಾ 100 ರಷ್ಟು ಮಾಡಿ ಯಶಸ್ವಿ ಮಾಡಬೇಕು ಎಂದು ಹೇಳಿದರು.

ಬೈಕ್ ರ್ಯಾಲಿ:
ಜಾಗೃತಿ ವಾಹಿನಿ ಜಾಥಾ ತಾಲ್ಲೂಕಿನ ಮತ್ತಿಘಟ್ಟ ಗ್ರಾಮ ಪಂಚಾಯತಿಯಿಂದ ಪ್ರಾರಂಭಿಸಿ ಅರೇನಳ್ಳಿ ಗೇಟ್, ಲಕ್ಮ್ಮೀಪುರ, ಸೀಗೇಬಾಗಿ ಗೇಟ್, ತಿಮ್ಲಾಪುರ, ಹುಳಿಯಾರು ನಗರದಲ್ಲಿ ಜಾಗೃತಿ ಜಾಥಾವನ್ನು ಅಂತ್ಯಗೊಳಿಸಲಾಯಿತು.

ಮತದಾನ ಜಾಗೃತಿ ಹೆಂಡ್ ಔಟ್ಸ್ ಗಳನ್ನು ಹಿಡಿದುಕೊಂಡು. ಜಾಥಾ ಉದ್ದಕ್ಕೂ ಮತದಾನದ ಮಹತ್ವವನ್ನು ಸಾರುವ  ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಜಿಂಗಲ್ಸ್ ಗಳ ಮೂಲಕ 85 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳ ಮೂಲಕ ಅರಿವು ಮೂಡಿಸಲಾಯಿತು.

ಪಂಚಿನ ಮೆರವಣಿಗೆ :
ವಿಶೇಷವಾಗಿ ಸಂಜೆ ವೇಳೆ ಜನನಿಬೀಡಿತ ಪ್ರದೇಶಗಳಲ್ಲಿ  ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸೇರಿ ವೈವಿದ್ಯಮಯವಾದ ಶೈಲಿಗೆ ರೂಪಕ ಎಂಬಂತೆ ಪಂಜನ್ನು ಹಿಡಿದು ಜನರನ್ನು ತಮ್ಮತ್ತ ಆಕರ್ಷಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಲಾಯಿತು.

ಜಾಗೃತಿ ಮಾನವ ಸರಪಳಿ :
ಹುಳಿಯಾರು ನಗರದ ವೃತ್ತ, ಸಂತೆ, ಕಾಲೋನಿಯ ಬೀದಿಗಳಲ್ಲಿ  ಜಾಗೃತಿ ಮಾನವ ಸರಪಳಿ ಮಾಡುವ ಮೂಲಕ ಜನರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.

ಮೆಣದ ಭತ್ತಿ ಹಿಡಿದು ಮತದಾನ ಜಾಗೃತಿ:


ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೆಣದ ಭತ್ತಿ ಹಿಡಿದು  ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಜನಸಾಮಾನ್ಯರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಮಾನ್ಯ ತಹಶಿಲ್ದಾರರಾದ ಅರ್ಚನಾ ಭಟ್ ಅವರು, ಮುಖ್ಯ ಅಧಿಕಾರಿ ಭೂತಪ್ಪ ಅವರು (ಪಟ್ಟಣ ಪಂಚಾಯ್ತಿ) ಹುಳಿಯಾರು, ಸುರೇಶ್ ತಾಪಂ ಸಹಾಯಕ ನಿರ್ದೇಶಕರು ( ಗ್ರಾ.ಉ) ರವರು ಸೇರಿದಂತೆ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ನರೇಗಾ ಸಿಬ್ಬಂದಿವರ್ಗ, ಕಾರ್ಯದರ್ಶಿಗಳು, ಕರ ವಸೂಲಿಗಾರರು,ಡಿ ಇ ಓಗಳು, ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ