ಕರ್ನಾಟಕದ ಜನ, ಪ್ರಜಾಪ್ರಭುತ್ವಕ್ಕೆ ಸೋಲು ಎಂದ ಮಾಯಾವತಿ
ಕರ್ನಾಟಕದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಕೊನೆಯಾಗಿರುವುದಕ್ಕೆ ಬಿಎಸ್ಪಿ ನಾಯಕಿ ಮಾಯಾವತಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮೈತ್ರಿ ಸರಕಾರ ಪತನಗೊಂಡಿರೋದು ಪ್ರಜಾಪ್ರಭುತ್ವದ ಕರಾಳ ಅಧ್ಯಾಯವಾಗಿದೆ. ದುರಾಸೆಯ ಜನರಿಗೆ ಜಯವಾಗಿದೆ ಅಂತ ಬಿಜೆಪಿ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪ್ರಸ್ತುತ ರಾಜಕೀಯದಲ್ಲಿ ಕರ್ನಾಟಕದ ಜನರು ಹಾಗೂ ಪ್ರಜಾಪ್ರಭುತ್ವ ಸೋತಿದೆ ಅಂತ ಮಾಯಾವತಿ ಹೇಳಿದ್ದಾರೆ.
ಇದೇ ವೇಳೆ, ರಾಜ್ಯದ ಬಿಎಸ್ಪಿ ಶಾಸಕ ಎನ್.ಮಹೇಶ್ ವಿರುದ್ಧ ಮಾಯಾವತಿ ಕಿಡಿಕಾರಿದ್ದಾರೆ.