ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ

ಮಂಗಳವಾರ, 23 ಜುಲೈ 2019 (20:14 IST)
ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಕುಮಾರಸ್ವಾಮಿ  ನೇತೃತ್ವದ ಸರಕಾರ ಬಹುಮತವನ್ನು ಕಳೆದುಕೊಂಡು ಪತನ ಹೊಂದಿದೆ.

ಇಂದು ವಿಶ್ವಾಸಮತ ಯಾಚನೆ ಬಯಸಿದ್ದ ಸಿಎಂ ಕುಮಾರಸ್ವಾಮಿಯವರಿಗೆ ನಿರೀಕ್ಷೆಯಂತೆಯೇ ಸೋಲಾಗಿದೆ. ಇದೀಗ ಕುಮಾರಸ್ವಾಮಿ ಸರಕಾರ ಕಳೆದ 14 ತಿಂಗಳ ಅವಧಿಯನ್ನು ಪೂರ್ಣಗೊಳಿಸಿ ವಿಶ್ವಾಸಮತದಲ್ಲಿ ಸೋಲು ಕಂಡಿದೆ. 
 
ವಿಶ್ವಾಸಮತ ನಿರ್ಣಯದ ಪರವಾಗಿ 99  ಮತಗಳು ಬಂದರೆ ವಿಶ್ವಾಸಮತದ ವಿರುದ್ಧವಾಗಿ 105 ಮತಗಳು ಬಂದವು. ಕೆಲ ದಿನಗಳಿಂದ ರಾಜ್ಯದ ಜನತೆಗೆ ಇರಿಸು ಮುರಿಸು ಉಂಟು ಮಾಡಿದ್ದ ಬೃಹನ್ನಾಟಕಕ್ಕೆ ಇಂದು ತೆರೆ ಬಿದ್ದಿದೆ. 
 
ಸಭಾಪತಿ ರಮೇಶ್ ಕುಮಾರ್ ವಿಶ್ವಾಸಮತವನ್ನು ಧ್ವನಿಮತಕ್ಕೆ ಹಾಕುವಂತೆ ಕೋರಿದರು. ಧ್ವನಿಮತದ ನಂತರ ಶಾಸಕರ ತಲೆ ಎಣಿಕೆ ನಡೆಯಿತು. ಕಾಂಗ್ರೆಸ್- ಜೆಡಿಎಸ್ ಪರವಾಗಿ ಸದನದಲ್ಲಿ 99 ಶಾಸಕರು ಉಪಸ್ಥಿತರಿದ್ದರೆ ಬಿಜೆಪಿಯ 105 ಶಾಸಕರು ಹಾಜರಿದ್ದರು. 
 
ಸಿಎಂ ಕುಮಾರಸ್ವಾಮಿ ಸರಕಾರ ಪತನವಾಗಿದ್ದರಿಂದ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಸುಲಭವಾಗಿ ಅಧಿಕಾರದ ಗದ್ದುಗೆ ಏರಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ