ಬಿಎಸ್ ಯಡಿಯೂರಪ್ಪ ನೇಣು ಹಾಕಿಕೊಳ್ಳಲಿ: ಎಂಬಿ ಪಾಟೀಲ್
ನೀರಾವರಿ ಸಚಿವರು ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಇಂತಹವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಬಿಎಸ್ ವೈ ಮೊನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ್ದ ನೀರಾವರಿ ಸಚಿವರು ಈ ಅಕ್ರಮ ಟೆಂಡರ್ ನ್ನು ರದ್ದುಗೊಳಿಸಲಾಗಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. ಭ್ರಷ್ಟಾಚಾರವೆಸಗಿದ್ದರೆ ನನ್ನ ಮೇಲೆ ಎಸಿಬಿಗೆ ದೂರು ಕೊಡಲಿ, ಸಿಬಿಐ ತನಿಖೆಯಾಗಲಿ. ನನಗೆ ಭಯವಿಲ್ಲ. ಕಿಕ್ ಬ್ಯಾಕ್ ಸಾಬೀತುಪಡಿಸದಿದ್ದರೆ ಬಿಎಸ್ ವೈ ನೇಣು ಹಾಕಿಕೊಳ್ಳಲಿ ಎಂದಿದ್ದಾರೆ.