ಲೋಕಸಭೆಗೆ ಸಚಿವರನ್ನು, ಶಾಸಕರನಾಗಿ ಪರಿಗಣಿಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ ಎಂದ ಎಂ .ಬಿ ಪಾಟೀಲ್

ಭಾನುವಾರ, 13 ಆಗಸ್ಟ್ 2023 (15:02 IST)
ರಾಜ್ಯಪಾಲರಿಗೆ ನಾಮನಿರ್ದೇಶನ ಪತ್ರ ಹೋಗದ ವಿಚಾರವಾಗಿ ‌ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು,ಈಗಾಗಲೇ ಈ ಬಗ್ಗೆ ಚರ್ಚೆಯಾಗಿದೆ.ಫ್ಯಾಬ್ರಿಕೇಟೆಡ್ ಡಾಕ್ಯುಮೆಂಟ್ ಬಗ್ಗೆ ಆಗ ಸರ್ಕಾರದಿಂದ ರಾಜ್ಯಪಾಲರಿಗೆ ಹೋಗೆ ಇರಲಿಲ್ಲ.ಈಗ ಏನಾಗಿದೆ ಆ ಬಗ್ಗೆ ಮುಖ್ಯ ಮಂತ್ರಿಗಳಿಗೆ ಕೇಳಬೇಕು.ಅಧಿಕೃತವಾಗಿ ಪತ್ರ ಹೋಗದ ಮೇಲೆ ರಾಜ್ಯಪಾಲರು ಸ್ಪಷ್ಟನೆ ಕೇಳಬೇಕು.ಅಫೀಶಿಯಲ್ ಆಗಿ ಬಾರದೆ, ಸೋಶಿಯಲ್ ಮೀಡಿಯಾದಲ್ಲಿ ಬಂದ ಪೋಸ್ಟ್ ಮೇಲೆ ಜವಾಬ್ದಾರಿಯುತ ಆದವರು ಕೇಳಬೇಕು.ಜವಾಬ್ದಾರಿ ಇದ್ದವರು ಕರೆದು ಕೇಳಬೇಕು.ಗವರ್ನರ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು ಅಂತಾ ಎಂ ಬಿ ಪಾಟೀಲ್ ಹೇಳಿದ್ದಾರೆ.
 
ಇನ್ನೂ ಈ ವೇಳೆ ಲೋಕಸಭೆ ಸ್ಪರ್ಧೆಗೆ ಸಚಿವರಿಂದ ನಿರಾಸಕ್ತಿ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು,ನಾನು ಸಹ ದೆಹಲಿಯ ಸಭೆಯಲ್ಲಿ ಭಾಗಿಯಾಗಿದ್ದೆ.ಸಭೆಯಲ್ಲಿ ಚರ್ಚೆ ಆಗಿಲ್ಲ, ಆದರೆ  ಕೆಲ ಸಂದರ್ಭಗಳಲ್ಲಿ ಕೇಳಬೇಕಾಗುತ್ತದೆ.ಲೋಕಸಭೆಗೆ ಸಚಿವರನ್ನು, ಶಾಸಕ ರನ್ನ  ಪರಿಗಣಿಸುತ್ತಾರೆ.ಪರಿಗಣಿಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಎಂ .ಬಿ ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ