ಎಲ್ಲ ಆಯಾಮಗಳಲ್ಲಿ ತನಿಖೆ ಆಗುತ್ತಿದೆ-ಬಿಬಿಎಂಪಿ ಚೀಫ್‌ ಕಮಿಷನರ್ ತುಷಾರ್ ಗಿರಿನಾಥ್

ಭಾನುವಾರ, 13 ಆಗಸ್ಟ್ 2023 (14:00 IST)
ಅಗ್ನಿ ಅವಘಡ ದುರಂತ ಘಟನೆ ಸಂಬಂಧ ಪೊಲೀಸರಿಗೆ ದೂರು ಬಿಬಿಎಂಪಿ ಚೀಫ್‌ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.ದೂರಿನ ಅನ್ವಯ ವಿಚಾರಣೆ ನಡೆಯುತ್ತಿದೆ.ಎಲ್ಲ ಆಯಾಮಗಳಲ್ಲಿ ತನಿಖೆ ಆಗುತ್ತಿದೆ.ತನಿಖೆಗೆ ನಮ್ಮ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ.ಲ್ಯಾಬ್ ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.ಇನ್ನಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ರು.
 
ಇನ್ನೂ ಲ್ಯಾಬ್ ಹೊರಗಡೆ ಆಂಬುಲೆನ್ಸ್ ಇರಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ ಸರಿಯಾಗಿ ಕಮಿಷನರ್ ಸ್ಪಂದಿಸಿಲ್ಲ.ಡಿ ಗ್ರೂಪ್ ನೌಕರ ಲ್ಯಾಬ್ ನಲ್ಲಿ ಸಹಾಯ ಮಾಡಬಹುದುಆದ್ರೆ ಎಲ್ಲ ಕೆಲಸ ಅವರೇ ಮಾಡುವಂತಿಲ್ಲ.ಈ ಕುರಿತು ಆಂತರಿಕ ತನಿಖೆಗೆ ಇಂಜಿನಿಯರ್ ಇನ್ ಚೀಫ್ ಪ್ರಹ್ಲಾದ್ ಅವರಿಗೆ ವಹಿಸಲಾಗಿದೆ.ಅವರು ಇಡೀ ಪ್ರಕರಣದ ಆಂತರಿಕ ವರದಿಯನ್ನ ನೀಡಲಿದ್ದಾರೆ.ವರದಿ ಕೊಟ್ಟ ನಂತರ ಡಿಸಿಎಂ, ಸಿಎಂಗೆ ಕಳುಹಿಸಲಾಗುವುದು.ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆಅಗ್ನಿ ಅವಘಡದಲ್ಲಿ ಒಂಬತ್ತು ಜನರಲ್ಲಿ 6 ಜನರಿಗೆ ಯಾವುದೇ ಅಪಾಯ ಇಲ್ಲ.ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.ಬಿಬಿಎಂಪಿ ವತಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.ಮುಖ ಸುಟ್ಟವರಿಗೆ ಸರ್ಜರಿ ಮಾಡಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ