ಹಾಲುಮತ ಸಮಾಜ: ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಸಭೆ

ಭಾನುವಾರ, 15 ಜುಲೈ 2018 (18:05 IST)
ಹಾಲುಮತ ಸಮಾಜದವರನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಾಗಿನೆಲೆ ಕನಕ ಗುರು ಪೀಠದಲ್ಲಿ ಸಮಾಜದ ಪೂರ್ವಾಭಾವಿ ಸಭೆ ನಡೆಸಲಾಯಿತು.

ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 30 ಜಿಲ್ಲೆಯ ಸಮುದಾಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.  ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀ ಗಳು, ಇಂದು ಎಲ್ಲಾ ಜಿಲ್ಲೆಯ ಸಮುದಾಯದ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಹಾಲುಮತ ಸಮುದಾಯದವರನ್ನು ಎಸ್ ಟಿ ಮೀಸಲಾತಿಗೆ ಒಳಪಡಿಸುವಂತೆ ಒತ್ತಾಯಿಸಲು ಹೋರಾಟದ ಬಗ್ಗೆ ಸಭೆ ನಡೆಸಲಾಗಿದ್ದು. ಈಗಾಗಲೇ ಮುಖ್ಯಮಂತ್ರಿಗಳಿಗೆ  ಮನವಿಯನ್ನು ಸಲ್ಲಿಸಲಾಗಿದೆ.

ಎಸ್ ಟಿ ಮೀಸಲಾತಿಗೆ ಸೇರಿಸಿದ್ರೆ ಸಮಾಜ ಏಳಿಗೆ ಸಾಧ್ಯ. ಇದರಿಂದ ಎಲ್ಲಾ ಪದಾಧಿಕಾರಿಗಳಿಗೆ  ನೇರವಾಗಿ ಹೇಳಿದ್ದೇವೆ. ಯಾವುದೇ ಉದ್ವಿಗ್ಧ ಪರಿಸ್ಥಿತಿ ಉಂಟು ಮಾಡಬೇಡಿ. ಸ್ನೇಹದಿಂದ, ತಾಳ್ಮೆಯಿಂದ ಹೋರಾಟ ಮಾಡೋಣಾ.  ‌ ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕೆ ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂದು ಶ್ರೀ ಗಳು ವಿಶ್ವಾಸ ವ್ಯಕ್ತಪಡಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ