ಪುರುಷರೇ ಎಚ್ಚರ! ಸಾವು ಸಂಭವಿಸುವ ಸೂಚಕವಾಗಿದೆಯಂತೆ ನಿಮಿರುವಿಕೆ ಸಮಸ್ಯೆ

ಭಾನುವಾರ, 7 ಏಪ್ರಿಲ್ 2019 (09:52 IST)
ಬೆಂಗಳೂರು : ‘ನಿಮಿರುವಿಕೆ ಸಮಸ್ಯೆ ಹೃದಯಸಂಬಂಧಿ ತೊಂದರೆಯ ಪ್ರಮುಖ ಸೂಚಕವೂ ಆಗಿದೆ’ ಎಂದಿದೆ ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಜರ್ನಲ್‍ನ ವರದಿ ಮಾಡಿದೆ.

ನಿಮಿರುವಿಕೆ ಸಮಸ್ಯೆಯು ಹೃದಯದ ಸಮಸ್ಯೆಯನ್ನು ಇಮ್ಮಡಿಗೊಳಿಸಬಹುದು ಅಥವಾ ಹೃದಯಾಘಾತದ ಅಪಾಯವನ್ನು ತಂದೊಡ್ಡಬಹುದು. ಅಲ್ಲದೇ ನಿಮಿರುವಿಕೆ ಸಮಸ್ಯೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವೂ ಆಗಿರುವುದರಿಂದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕವೆಂದು ಅಮೆರಿಕನ್ ಯೂರೊಲಜಿ ಅಸೋಸಿಯೇಶನ್ ತಿಳಿಸಿದೆ.

 

‘ಶಿಶ್ನದ ನಾಳಗಳಲ್ಲಿನ ರಕ್ತಸಂಚಲನಕ್ಕೆ ಅಡ್ಡಿಯಾಗುವುದೇ ನಿಮಿರುವಿಕೆ ಸಮಸ್ಯೆಯ ಮೂಲ. ಇದು ಮುಂದೆ ದೇಹದ ಇನ್ನಿತರ ಭಾಗಗಳಿಗೂ ರಕ್ತಸಂಚಲನದಲ್ಲಿ ತೊಡಕಾಗುವುದನ್ನು ಸೂಚಿಸುತ್ತದೆ. ನಿಮಿರುವಿಕೆ ಸಮಸ್ಯೆ ಇರುವ ಪುರುಷರಿಗೆ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯಸ್ತಂಭನದಿಂದ ದಿಢೀರ್ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಸಮಸ್ಯೆಯಿರುವ ಪುರುಷರು ಕಡ್ಡಾಯವಾಗಿ ಹೃದಯದ ಪರೀಕ್ಷೆಗೆ ಒಳಪಟ್ಟರೆ ಒಳಿತು ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ