ಮೆಟ್ರೋ ಪಿಲ್ಲರ್ ಕುಸಿಯಲು ಮೆಟ್ರೋ ಎಂಡಿ ನೇರ ಹೊಣೆ

ಶನಿವಾರ, 14 ಜನವರಿ 2023 (14:46 IST)
ಬಿ ಎಂ ಆರ್ ಸಿಎಲ್ ಎಂಡಿ ಅಂಜುಂ ಫರ್ವೆಜ್ ರನ್ನು ಇಲ್ಲಿಂದ ಟ್ರಾನ್ಫರ್ ಮಾಡಬೇಕು.ಎಂಡಿ ಗೆ ಮೆಟ್ರೋ ಬಗ್ಗೆ ಯಾವುದೇ ಅನುಭವವಿಲ್ಲ.ಮೆಟ್ರೋ ಬಗ್ಗೆ ಜ್ಞಾನ, ಅನುಭವ, ವಿದ್ಯಾರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಂಡಿದ್ದೆ.ನಾಗವಾರ ಮೆಟ್ರೋ ಪಿಲ್ಲರ್ ರಾಡುಗಳು ಕುಸಿಯಲು ಕಾರಣ ಎಂದು ಅಂಜುಂ ಫರ್ವೆಜ್ ಮೇಲೆ ನೇರವಾರ ಆರೋಪ‌ವನ್ನ ಸೂರ್ಯನಾರಾಯಣ ಮೂರ್ತಿ ಮಾಡಿದ್ದಾರೆ.ಇಂದು ಸಿಎಂಗೆ ಪತ್ರ ಬರೆಯುತ್ತಿನಿ ಎಂದ ಬಿಎಂಆರ್ ಸಿ ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ನನ್ನ ದೂರನ್ನು ಸರಿಯಾಗಿ ಪರಿಶೀಲನೆ ಮಾಡಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ.ಸರಿಯಾದ ವಿದ್ಯಾರ್ಹತೆ, ಮೆಟ್ರೋ ಬಗ್ಗೆ ಅನುಭವ ಇಲ್ಲದವರನ್ನು ಎಂಡಿ ನೇಮಕ ಮಾಡಿಕೊಂಡಿದ್ದಾರೆ.
 
ಅನಧಿಕೃತವಾಗಿ ಐನೂರಕ್ಕು ಹೆಚ್ಚು ಜನರನ್ನು ಬಿಎಂಆರ್ಸಿಎಲ್ ‌ನಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ.65 ರಿಂದ 70 ವರ್ಷ ವಯಸ್ಸಾಗಿ ನಿವೃತ್ತಿವೊಂದಿದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.ಇಂತಹ ಅರ್ಹತೆ ಇಲ್ಲದ ಇಂಜಿನಿಯರ್ ಗಳಿಂದ ಏನನ್ನು ಅಪೇಕ್ಷಿಸಲು ಸಾಧ್ಯ.ಮೆಟ್ರೋ ಬಗ್ಗೆ ಅಧ್ಯಾಯನ ಮಾಡಿದ ಯುವಕರಿಗೆ ಕೆಲಸ ನೀಡಿದ್ರೆ ಮೊನ್ನೆಯ ಅವಘಡ ಆಗುವುದು ತಪ್ಪುತ್ತಿತ್ತು.ನಾನು ಈಗಾಗಲೇ ರೈಲ್ವೆ ಸಚಿವರಿಗೆ, ಅರ್ಬನ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ ಹಾಗೂ ರಾಜ್ಯದ ಸಿಎಂಗೆ ಸರಿಯಾದ ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರು ನೀಡಿದ್ದೇನೆ.ಸುಮಾರು ಐನೂರು ಜನರನ್ನು ಯಾವುದೇ ನೋಟಿಫಿಕೇಷನ್ ಮಾಡದೆ ಕೆಲಸ ತೆಗೆದುಕೊಂಡಿದ್ದಾರೆ.ಗುತ್ತಿಗೆದಾರ ಕೆಲಸ ಮಾಡುವ ವೇಳೆ ಬಿಎಂಆರ್ಸಿಎಲ್ ಅಧಿಕಾರಿಗಳು ಪರಿಶೀಲನೆ ಮಾಡುವುದು ಅವರ ಕರ್ತವ್ಯ ನಡೆದಿದೆ.ಘಟನೆ ನಡೆದು ನಾಲ್ಕು ಗಂಟೆ ಆದ ಮೇಲೆ ಎಂಡಿ ಸ್ಥಳಕ್ಕೆ ಹೋಗಿದ್ದಾರೆ .ಇದರಲ್ಲೇ ಗೊತ್ತಾಗುತ್ತದೆ ಇವರಿಗೆ ಎಷ್ಟರ ಮಟ್ಟಿಗೆ ಜನರ ಬಗ್ಗೆ ಕಾಳಜಿ ಇದೆ ಎಂದು ಬಿಎಂಆರ್ಸಿಎಲ್ ಇ‌ಂಜಿನಿಯರ್ ಗಳು ಪ್ರತಿದಿನ ಸಿವಿಲ್ ಕಾಮಗಾರಿಗಳನ್ನು ತಪಾಸಣೆ ಮಾಡಿಲ್ಲ.ಎಂಡಿ ಗೂ ಅಷ್ಟೊಂದು ಅನುಭವವಿಲ್ಲ ನಾನು ಸಿಎಂಗೆ  ಈ ಘಟನೆ ಬಗ್ಗೆ ಪತ್ರ ಬರೆಯುತ್ತೆನೆ.ನಾನು ಕೊಟ್ಟ ದೂರನ್ನು ‌ಸರಿಯಾಗಿ ಪರಿಶೀಲಿಸಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ ಮೊದಲು ಎಂಡಿ ಅಂಜುಂ ಫರ್ವೆಜ್ ಅನ್ನು ಇಲ್ಲಿಂದ ಟ್ರಾನ್ಫರ್ ಮಾಡಬೇಕು.
 
ಮೆಟ್ರೋ ಬಗ್ಗೆ ಅನುಭವ ಇಲ್ಲದ, ವಿದ್ಯಾರ್ಹತೆ ಇಲ್ಲದೇ ನೇಮಕಗೊಂಡಿರುವವರನ್ನು ಕೆಲಸ ದಿಂದ ವಜಾ ಮಾಡಬೇಕೆಂದು ಮನವಿ ಮಾಡ್ತಿನಿ.ಮೆಟ್ರೋ ಬಗ್ಗೆ ಅನುಭವ ಇರುವ ಯುವಕರನ್ನು ಹೊಸದಾಗಿ ನೇಮಕ‌ ಮಾಡಿಕೊಳ್ಳಬೇಕು.ಸೂರ್ಯ ನಾರಾಯಣ ಮೂರ್ತಿ ಉಪಾಧ್ಯಕ್ಷ ಬಿಎಂಆರ್ಸಿಎಲ್ ಎಂಪ್ಲಾಯಿಸಿ ಅಸೋಸಿಯೇಷನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ