ಕೊರೋನಾ ಭಯಕ್ಕೆ ಮಹಾನಗರಗಳ ಬಿಡುತ್ತಿರುವ ಕಾರ್ಮಿಕರು

ಬುಧವಾರ, 7 ಏಪ್ರಿಲ್ 2021 (08:35 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಭೀಕರವಾಗಿದೆ. ಅದರಲ್ಲೂ ಮಹಾನಗರಗಳಾದ ಮುಂಬೈ, ಬೆಂಗಳೂರಿನಲ್ಲಿ ವ್ಯಾಪಕವಾಗಿದೆ.


ಈ ಹಿನ್ನಲೆಯಲ್ಲಿ ಹಲವು ವಲಸೆ ಕಾರ್ಮಿಕರು ಮಹಾನಗರಗಳಿಂದ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಈ ಮಹಾನಗರಗಳಿಗೆ ಹೆಚ್ಚಾಗಿ ಉತ್ತರಪ್ರದೇಶ, ಬಿಹಾರಗಳಿಂದ ಕೂಲಿಗಾಗಿ ಬರುತ್ತಾರೆ. ಆದರೆ ಈಗ ಕೊರೋನಾ ಭಯ ಇವರೆಲ್ಲರನ್ನೂ ಮರಳಿ ಊರಿಗೆ ತೆರಳುವಂತೆ ಮಾಡಿದೆ.

ಈ ಮಹಾನಗರಗಳಲ್ಲಿ ಕ್ವಾರಂಟೈನ್ ವ್ಯವಸ್ಥೆಯ ಕೊರತೆ, ದುಬಾರಿ ವೈದ್ಯಕೀಯ ವೆಚ್ಚ ಕಾರ್ಮಿಕರಿಂದ ಭರಿಸಲಾಗುತ್ತಿಲ್ಲ. ಅಲ್ಲದೆ ಕೊರೋನಾದಿಂದಾಗಿ ಕೆಲಸವೂ ಕಡಿಮೆ, ವೇತನವೂ ಕನಿಷ್ಠ ಮಟ್ಟಕ್ಕಿಳಿದಿದೆ. ಹೀಗಾಗಿ ಕಾರ್ಮಿಕರು ಬೇರೆ ದಾರಿಯಿಲ್ಲದೇ ಮರಳಿ ಊರು ಸೇರಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ