ಜಮ್ಮುಕಾಶ್ಮೀರದಲ್ಲಿ ಉಗ್ರರು ಮತ್ತೆ ಆಟ್ಟಹಾಸ
ಜಮ್ಮುಕಾಶ್ಮೀರದಲ್ಲಿ ಉಗ್ರರು ಮತ್ತೆ ಆಟ್ಟಹಾಸ ಮುಂದುವರೆಸಿದ್ದಾರೆ. ಇಂದು ಬೆಳಗ್ಗೆ 11.45ರ ಸುಮಾರಿಗೆ ಶ್ರೀನಗರದ ಶಾಲೆಯೊಂದರಲ್ಲಿ ಉಗ್ರರು ಇಬ್ಬರು ಶಿಕ್ಷಕರನ್ನು ಹತ್ಯೈಗೆದಿದ್ದಾರೆ. ಶ್ರೀನಗರದ ಈದ್ಗಾ ಸಂಗಾಮ್ ಲ್ಲಿರುವ ಶಾಲೆಯಲ್ಲಿ ಭಯೋತ್ಪಾದಕರು ದುಷ್ಕೃತ್ಯವೆಸಗಿದ್ದಾರೆ. ಮಹಿಳಾ ಪ್ರಾಂಶುಪಾಲೆ ಸುಪಿಂದರ್ ಕೌರ್ ಹಾಗೂ ದೀಪಕ್ ಚಂದ್ ಎನ್ನುವ ಶಿಕ್ಷಕ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಜಮ್ಮು-ಕಾಶ್ಮೀರ್ ಡಿಜಿಪಿ ದಿಲ್ಬಾಗ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಉಗ್ರರು ಸಮಾಜದ ಒಳಿತಿಗಾಗಿ ದುಡಿಯುತ್ತಿರುವವರನ್ನ ಅಮಾಯಕರನ್ನ ಹತ್ಯೆ ಮಾಡ್ತಿದ್ದಾರೆ. ಪಾಕಿಸ್ತಾನದ ಸೂಚನೆಯಂತೆ ಉಗ್ರರು ಈ ಕೃತ್ಯ ನಡೆಸ್ತಿದ್ದಾರೆ. ಅಪರಾಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ.