ಬೇವಿನ ಮರದಲ್ಲಿ ಬರುತ್ತಿರುವ ಹಾಲು: ಗ್ರಾಮಸ್ಥರಿಂದ ಪೂಜೆ

ಶುಕ್ರವಾರ, 18 ಜನವರಿ 2019 (15:11 IST)
ಬೇವಿನ ಮರದಲ್ಲಿ ಕಳೆದ ರಾತ್ರಿಯಿಂದ ಹಾಲು ಸುರಿಯುತ್ತಿದೆ. ಹೀಗಾಗಿ ಹಾಲು ಕೊಡುವ ಮರಕ್ಕೆ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೆಳಗೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಚಿಕ್ಕ ಜವರೇಗೌಡ ಎಂಬುವರ ಮನೆ ಹಿತ್ತಲಿನಲ್ಲಿರುವ ಬೇವಿನ ಮರದಲ್ಲಿ ರಾತ್ರಿಯಿಂದ ಬೇವಿನ ಮರದ ಕಾಂಡದಲ್ಲಿ ಬೆಳ್ಳಗೆ ಹಾಲು ಸೋರಿಕೆಯಾಗುತ್ತಿದೆ.

ಹಾಲು ಸಿಹಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಬೇವಿನ ಮರಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತ ಭಾವ ಮೆರೆಯುತ್ತಿದ್ದಾರೆ. ಹಾಲು ಸೋರಿಕೆ ನೋಡಲು ಅಕ್ಕ ಪಕ್ಕ ಗ್ರಾಮದವರು ಆಗಮಿಸುತ್ತಿದ್ದು ದೇವರ ಲೀಲೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ