ಕೇಳಿದ್ದು ಕೊಡಲಿಲ್ಲ. ಇದ್ದಿದ್ದು ಕೊಡಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ

ಶನಿವಾರ, 7 ಆಗಸ್ಟ್ 2021 (15:32 IST)
ಈ ಹಿಂದೆ ಇದ್ದ ಖಾತೆಯನ್ನೇ ಮುಂದುವರಿಸುತ್ತಾರೆ ಅಂತಾ ಅಂದುಕೊಂಡಿದ್ದೆ. ಅಲ್ದೇ ನನಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲೆ ಆಸಕ್ತಿ ಇತ್ತು. ಆದ್ರೆ ಅದನ್ನು ಈಶ್ವರಪ್ಪ ಅವರಿಗೆ ನೀಡಿದ್ದಾರೆ‌ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಿರಾಸೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ನಮ್ಮ ನಮ್ಮ ಆಸಕ್ತಿ ಕ್ಷೇತ್ರದ ಆಕಾಂಕ್ಷೆ ಸಾಮಾನ್ಯವಾಗಿರುತ್ತೆ.
ಈಶ್ವರಪ್ಪ ನನಗಿಂತ ಹಿರಿಯರಿದ್ದಾರೆ
. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಮ್ಮ ಕೆಲಸ ಆಗಬೇಕು ಅಂತಾ ಬಂದ್ರೆ ಈಶ್ವರಪ್ಪ ಇದ್ದಾರೆ‌. ಅವರ ಬಳಿ ಮಾಡಿಸಿಕೊಳ್ಳುತ್ತೇನೆ ಎಂದರು.
ಹಿಂದುಳಿದ ವರ್ಗದ ಜೊತೆ ಸಮಾಜ ಕಲ್ಯಾಣ ಇಲಾಖೆ ಕೂಡ ಕೊಟ್ಟಿದ್ದಾರೆ‌. ಇದನ್ನು ಕೂಡ ಸಮರ್ಥವಾಗಿ ನಿಭಾಯಿಸುತ್ತೇನೆ‌. ಈ ಖಾತೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲಿಕ್ಕೆ ಅವಕಾಶ ಇದೆ. ಅದಕ್ಕೆ ನಾನು ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಧನ್ಯವಾದ ಅರ್ಪಿಸುತ್ತೇನೆ. ಉಸ್ತುವಾರಿಗೆ ಜಿಲ್ಲೆಯ ಆಯ್ಕೆ ಹಕ್ಕು ಸಚಿವರಿಗೆ ಇಲ್ಲ. ಯಾವ ಜಿಲ್ಲೆಯ ಉಸ್ತುವಾರಿ ಕೊಟ್ರು ನಾನು ಹೋಗುತ್ತೇನೆ. ಖಾತೆ ಬಗ್ಗೆ ನನಗೆ ತೃಪ್ತಿ ಮತ್ತು ಹೆಮ್ಮೆ ಇದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ