ಚೆಲುವರಾಯಸ್ವಾಮಿಗೆ ಭರ್ಜರಿಯಾಗಿ ಟಾಂಗ್ ನೀಡಿದ ಸಚಿವ ಪುಟ್ಟರಾಜು
ಮಂಗಳವಾರ, 9 ಅಕ್ಟೋಬರ್ 2018 (14:03 IST)
ಮಂಡ್ಯದಲ್ಲಿ ಮೈತ್ರಿ ಬೇಡ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಹಾಕುವಂತೆ ವರಿಷ್ಠ ರಲ್ಲಿ ಮನವಿ ಮಾಡ್ತೀನಿ. ವಿಧಾನಸಭೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನ ಗೆದ್ದ ಮಾತ್ರಕ್ಕೆ ಜೆಡಿಎಸ್ ಗೆ ಲೋಕಸಭೆ ಗೆಲವು ಸುಲಭವಲ್ಲ ಎಂದಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಎಸ್. ಪುಟ್ಟರಾಜು, ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡುವುದು ಹಾಗೇಯೇ ಎಂದು ತಿರುಗೇಟು ನೀಡಿದ್ದಾರೆ.
ಚೆಲುವರಾಯಸ್ವಾಮಿ ಅವ್ರನ್ನು ಸತ್ತ ಕುದುರೆಗೆ ಹೋಲಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಣ್ಣನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಮಂಡ್ಯದಲ್ಲಿ ಮೈತ್ರಿಯಾಗಿ ಎಂದು ನಾವು ಯಾರನ್ನು ಗೋಗರೆಯುತ್ತಿಲ್ಲ,
ಜನ ಕೊಟ್ಟ ತೀರ್ಪಿನಿಂದ, ಅನಿವಾರ್ಯತೆ ಎದುರಾಗಿದ್ರಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ನಾಯಕರು ರಾಜ್ಯದಲ್ಲಿ ಮೈತ್ರಿಗೆ ಸಮ್ಮತಿಸಿದ್ದಾರೆ. ಮಂಡ್ಯ ಜೆಡಿಎಸ್ ನ ಭದ್ರಕೋಟೆ, ಹೀಗಾಗಿ ನಾವು ಮೈತ್ರಿ ಮಾಡಿಕೊಳ್ಳಿ ಎಂದು ಯಾರನ್ನು ಗೋಗರೆಯುವುದಿಲ್ಲ. ನಾಗಮಂಗಲ ಇತಿಹಾಸದಲ್ಲಿ 52 ಸಾವಿರ ಲೀಡ್ ನಿಂದ ಗೆದ್ದ ಇತಿಹಾಸವಿಲ್ಲ. ಚೆಲುವರಾಯಸ್ವಾಮಿ ಅವ್ರನ್ನ ಜನರು ಸೋಲಿಸಿದ್ದು ಬಾಯಿಮುಚ್ಚಿಕೊಂಡು ಇರಲಿ ಅಂತ. ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡಿದರೆ ಹೀಗೇ ಆಗಿರೋದು ಎಂದು ಚೆಲುವರಾಯಸ್ವಾಮಿ ಗೆ ಟಾಂಗ್ ನೀಡಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಯಾರನ್ನ ಅಭ್ಯರ್ಥಿ ಮಾಡಿದ್ರು ಸ್ವಾಗತ ಮಾಡ್ತೀವಿ. ದೇವೆಗೌಡರ ಕುಟುಂಬದಿಂದ ಅಭ್ಯರ್ಥಿ ಹಾಕಿದ್ರು ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಬಹಳ ಜನ ಸಮರ್ಥರಿದ್ದಾರೆ. ಆದ್ರೆ ನಾನು ಯಾರನ್ನು ಸೂಚಿಸುವುದಿಲ್ಲ, ನಮ್ಮ ವರಿಷ್ಠರು ಯಾರನ್ನೇ ಆಯ್ಕೆ ಮಾಡಿದ್ರು ನಾವು ಅವ್ರನ್ನು ಗೆಲ್ಲಿಸಿಕೊಡ್ತೇವೆ ಎಂದು ಹೇಳಿದ್ದಾರೆ.