ಬೆಂಗಳೂರು : ಮುಂಬೈ ನಿಂದ ಜನರನ್ನು ಕರೆಸಿಕೊಂಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ಡಾ.ಸುಧಾಕರ್ ಗರಂ ಆಗಿದ್ದಾರೆ.
ಮುಂಬೈ ನಿಂದ ಚಿಕ್ಕಬಳ್ಳಾಪುರಕ್ಕೆ 200 ಜನ ಬಂದಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿಗೆ 6 ಬಸ್ ಆಗಮನವಾಗಿದೆ. ಇದರಿಂದ ಕೊರೊನಾ ಹರಡುವ ಭೀತಿಯಿಂದ ಭಯಗೊಂಡ ಸಚಿವ ಡಾ.ಸುಧಾಕರ್, ‘ಜನರನ್ನು ಕರೆಸಿಕೊಂಡಿದ್ದು ದುರದೃಷ್ಟಕರ. ಹೊರರಾಜ್ಯದವರಿಂದ ಸೋಂಕು ಹೆಚ್ಚಬಹುದು. ಈ ಆತಂಕ, ದುಗುಡದಿಂದ ನಿದ್ದೆ ಬರುತ್ತಿಲ್ಲ’ ಎಂದು ಟ್ವೀಟರ್ ನಲ್ಲಿ ಸಚಿವ ಬೇಸರ ವ್ಯಕ್ತಪಡಿಸಿದ್ದಾರೆ.