ಬೆಂಗಳೂರು : ಮೈಸೂರು ಪಾಕ್ ಎಂದರೆ ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ , ದೊಡ್ಡವರು ಎಲ್ಲರೂ ಇಷ್ಟಪಡುತ್ತಾರೆ. ಇಂತಹ ಸಿಹಿಯಾದ ಮೈಸೂರು ಪಾಕ್ ನ್ನು ಮನೆಯಲ್ಲಿಯೇ ತಯಾರಿಸಿ ತಿಂದರೆ ಇನ್ನೂ ರುಚಿಕರವಾಗಿ ಆರೋಗ್ಯಕರವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು: ಹಾಲು-1ಕಪ್, ಕಡಲೆಹಿಟ್ಟು-1 ಕಪ್, ತುಪ್ಪ-1 ಕಪ್, ಸಕ್ಕರೆ 2 ಕಪ್, ಏಲಕ್ಕಿ ಪುಡಿ ಚಿಟಿಕೆಯಷ್ಟು.
ಮಾಡುವ ವಿಧಾನ: ಕಡಲೆಹಿಟ್ಟನ್ನು ಒಂದು ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಹಾಲಿಗೆ ಸಕ್ಕರೆಯನ್ನು ಬೆರೆಸಿ ಒಲೆಯ ಮೇಲಿಡಿ. ಸಕ್ಕರೆ ಕರಗಿದ ನಂತರ 5 ನಿಮಿಷ ಹಾಲು ಕುದಿಯಲು ಬಿಡಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಕಡಲೆಹಿಟ್ಟನ್ನು ಹಾಕಿ, ಹಿಟ್ಟು ಗಂಟಾಗದಂತೆ ಕೈಯಾಡಿಸಿ. ಸ್ವಲ್ಪ ಸ್ವಲ್ಪ ತುಪ್ಪ ಅದಕ್ಕೆ ಹಾಕುತ್ತಾ ಕಲಸುತ್ತೀರಿ.
ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕುದಿಯಲು ಬಿಡಿ. ಕುದ್ದು ಗಟ್ಟಿಯಾದ ನಂತರ ಒಂದು ಅಗಲವಾದ ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಕುದಿಸಿದ ಪದಾರ್ಥವನ್ನು ಹರಡಿ. ಅದು ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ.