ಬಾಗಲಕೋಟೆಯಲ್ಲಿ ಸಚಿವ ಈಶ್ವರಪ್ಪ ತಂತ್ರಗಾರಿಕೆಯ ಹೇಳಿಕೆ

ಭಾನುವಾರ, 1 ಆಗಸ್ಟ್ 2021 (19:40 IST)
ಎಲ್ಲಾ ತರಹದ ಜನರಿರೋವಾಗ ಕೃಷ್ಣನ ತಂತ್ರಗಾರಿಕೆ ಮಾಡದೇ ಇದ್ದರೆ ಇಂದು ಅಧಿಕಾರ ಕಳೆದುಕೊಳ್ಳಬೇಕಿತ್ತು.
ಹೀಗಾಗಿ ಸಕಾ೯ರವೂ ಇದೆ, ಈಗಿನಂತೆ ಬುದ್ದಿವಂತಿಕೆಯಿಂದಲೇ ಸಂಪುಟ ರಚನೆಯಾಗುತ್ತೇ.ಮುಂದಿನ ಎರಡು ವಷ೯ ಉತ್ತಮ ಆಡಳಿತ ಕೊಡುತ್ತೇವೆ..ಮುಂದಿನ ಸಕಾ೯ರಕ್ಕೆ ಬಹುಮತ ತರುತ್ತೇವೆ ಎಂದು ಬಾಗಲಕೋಟಯಲ್ಲಿ ಕೆ ಎಸ್ ಈಶ್ವರಪ್ಪ  ವಿಶ್ವಾಸ ವ್ಯಕ್ತಪಡಿಸಿದರು. ಇದೆ  ಸಂದರ್ಭದಲ್ಲಿ ಮಾತನಾಡಿ ಡಿಸಿಎಂ ಆಗುವ ವಿಚಾರವಾಗಿ
ನಾನು ನನ್ನ ಜೀವನದಲ್ಲಿ ಇದೇ ಆಗಬೇಕೆಂದು ಅಪೇಕ್ಷೆಪಟ್ಟವನಲ್ಲ.
ಸಿಎಂ ಆಗಲಿಲ್ಲ, ಡಿಸಿಎಂ & ಮಂತ್ರಿ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಶಾಸಕ ಮಾತ್ರ ಇದ್ದೇ ಇರುತ್ತೇನೆ.
ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನು ಹೊತ್ತುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು..ಅಲ್ಲದೇ
ಕಾಂಗ್ರೆಸ್ ಪಕ್ಷದಲ್ಲಿ  ನಾನೇ ಸಿಎಂ ಅಂತಿರೋ ಕಾಂಗ್ರೆಸ್ ನಾಯಕರಿಗೆ ಆಣೆ ಪ್ರಮಾಣ ಮಾಡಲು ಈಶ್ವರಪ್ಪ ಸವಾಲ್ ಹಾಕಿದ್ದಾರೆ.ಡಿಕೆಶಿ, ಖಗೆ೯, ಸಿದ್ದರಾಮಯ್ಯ, ಪರಮೇಶ್ವರ ಸೇರಿ 4 ಜನ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ,ನಾವೊಬ್ಬರ ಕಾಲು ಒಬ್ಬರು ಎಳೆದಿಲ್ಲ, ಸೋಲಿಸೋ ಪ್ರಯತ್ನ ಮಾಡಿಲ್ಲ ಅಂತ ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ದು,
ಅವರು ಪ್ರಮಾಣ ಮಾಡಿದ್ರೆ ಅವರು ಹೇಳಿದಂತೆ ನಾನು ಕೇಳ್ತೇನೆ ಎಂದರು.ಬಿಜೆಪಿಯಲ್ಲಿ ಹೊರಗಿನಿಂದ ಬಂದವರಿಗೆ ಅಧಿಕಾರ ನೀಡಿದ ವಿಚಾರ‌ವಾಗಿ ಮಾತನಾಡಿ,ಬಿಜೆಪಿ ಹಾಲು ಇದ್ದ ಹಾಗೆ, ಬರುವವರು ತುಪ್ಪ ಇದ್ದ ಹಾಗೆ ಎಂದು,ನಮ್ಮ ಪಕ್ಷದಲ್ಲಿ ಜೀಣಿ೯ಸಿಕೊಳ್ಳುವ ಶಕ್ತಿಯಿದೆ...ಜೀಣ೯ವಾಗದೇ ಇರೋದನ್ನ ಉಗುಳುತ್ತೇವೆ...ಆದ್ರೆ ನಮ್ಮಲ್ಲಿ ಹಾಗೇನಿಲ್ಲ.ಯಾವುದೇ ಕಾಯ೯ಕತ೯ನನ್ನ ನಾವು ತಿರಸ್ಕಾರ ಭಾವನೆಯಿಂದ ನೋಡೋದಿಲ್ಲ.
ಕುಮಾರಸ್ವಾಮಿ ಅವರೇ ಇನ್ನೂ ಎಷ್ಟು ಜನ ಕಾಯ೯ಕತ೯ರನ್ನ ಕಳೆದುಕೊಳ್ತಿರೇನೋ,ಕುಮಾರಸ್ವಾಮಿ ಅವರೇ ಹಾಗೇ ಠಸ್ಸೇ ಹೊಡೆಯುತ್ತಾ ಕೂರುತ್ತೀರೇನು,
ಹಾಗಿದ್ದರೆ ಜನತಾದಳ ಮುಚ್ಚಿ ಬಿಡ್ತೇವೆ ಅಂತ ಹೇಳಿಬಿಡಿಲಿ ಎಂದು ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ